ತರಬೇತಿ ಭತ್ಯೆಗೆ ಅರ್ಜಿ ಆಹ್ವಾನ
ರಾಮನಗರ: ಕೌಶಲ್ಯಾಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿ ಪ್ರಥಮ ವರ್ಷದ ಬಿಎಸ್ಸಿ, ನರ್ಸಿಂಗ್ ಹಾಗೂ ಜಿಎನ್ಎಂ ನರ್ಸಿಂಗ್ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಯುವಕ, ಯುವತಿಯರಿಗೆ ತರಬೇತಿ ಭತ್ಯೆ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪಿಎಲ್ಡಿ ಬ್ಯಾಂಕ್ ಹತ್ತಿರ, ಲಕ್ಷ್ಮೀದೇವಮ್ಮ ಬಿಲ್ಡಿಂಗ್, ಐಜೂರು, ರಾಮನಗರ ಇಲ್ಲಿ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ.5ರೊಳಗೆ ಸದರಿ ಕಚೇರಿಗೆ ಸಲ್ಲಿಸಬೇಕು.
ಕಳಪೆ ಗೋದಿ ವಾಪಸು
ಮಾಗಡಿ: ಪಡಿತರ ವಿತರಣೆಗಾಗಿ ಕೆ.ಎಫ್.ಸಿ.ನಿಂದ ತಾಲೂಕಿಗೆ ಸುಮಾರು 450 ಬ್ಯಾಗ್ ಕಳಪೆ ಗೋಧಿ ಸರಬರಾಜಾಗಿತ್ತು. ಹುಳು ಮತ್ತು ದೂಳಿನಿಂದ ಕೂಡಿದ ಕಳಪೆ ಗೋದಿಯನ್ನು ಸಂಬಂಧಪಟ್ಟ ಆಹಾರ ಇಲಾಖೆ ಶಿರಸ್ತೇದಾರ್ ಸದಾಶಿವಯ್ಯ 450 ಬ್ಯಾಗ್ ಕಳಪೆ ಗೋದಿಯನ್ನು ವಾಪಸು ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.