ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಳು ಫಿಲ್ಟರ್ಗೆ ಮಣ್ಣು ಸಾಗಾಣಿಕೆ ಆರೋಪ: 11 ಟ್ರ್ಯಾಕ್ಟರ್ಗಳ ವಶ

Rashmi Kasaragodu
Updated On : 18 Jul 2013, 1:09 am

ದೊಡ್ಡಬಳ್ಳಾಪುರ: ಮರಳು ಫಿಲ್ಟರ್ ಮಾಡಲು ಕೆರೆಯಿಂದ ಮಣ್ಣು ಸಾಗಿಸಲಾಗುತ್ತಿದೆ ಎಂಬ ಆರೋಪದಲ್ಲಿ 11 ಟ್ರ್ಯಾಕ್ಟರ್ಗಳನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಗುಂಜೂರು ಗ್ರಾಮದ ಕೆರೆಯಿಂದ ಮಣ್ಣು ತುಂಬಿ ಟ್ರ್ಯಾಕ್ಟರ್ಗಳಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ಆರೋಪವನ್ನು ಟ್ರ್ಯಾಕ್ಟರ್ಗಳ ಮಾಲೀಕರು ನಿರಾಕರಿಸಿದ್ದಾರೆ. ನಾವು ಯಾವುದೇ ಅಕ್ರಮ ಮರಳು ಫಿಲ್ಟರ್ ದಂದೆಗೂ ಮಣ್ಣು ಸಾಗಿಸುತ್ತಿರಲಿಲ್ಲ. ಸ್ಥಳೀಯ ಬಾಳೇ ತೋಟವೊಂದಕ್ಕೆ ಮಣ್ಣು ಸಾಗುಸುವಾಗ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಟ್ರ್ಯಾಕ್ಟರ್ ಮಾಲೀಕರು ದೂರು ನೀಡಿದ್ದು, ಮರಳು ಫಿಲ್ಟರ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಲಿ. ಆದರೆ ಅನಾವಶ್ಯಕವಾಗಿ ಆರೋಪ ಹೊರಿಸಿ ವಾಹನಗಳನ್ನು ವಶಪಡಿಸಿಕೊಳ್ಳುವುದು ಸರಿಯಲ್ಲ ಎಂದು ದೂರಿದ್ದಾರೆ. ತಾಲೂಕಿನಲ್ಲಿ ಅಕ್ರಮ ಮರಳು ಫಿಲ್ಟರ್ ದಂದೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಗಂಭೀರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement