ಅಡೇಪೇಟೆಯಲ್ಲಿ ನೇತ್ರ ತಪಾಸಣಾ ಉಚಿತ ಶಿಬಿರ
ನೆಲಮಂಗಲ: ಪಟ್ಟಣದ ಅಡೇಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜುಲೈ 21ರ ಭಾನುವಾರ ಬೆಳಿಗ್ಗೆ
8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಪದ್ಮಭೂಷಣ ಡಾ.ಎಂ.ಸಿ.ಮೋದಿ ಚಾರಿಟೆಬಲ್ ಕಣ್ಣಿನ ಆಸ್ಪತ್ರೆ ಹಾಗೂ ನೆಲಮಂಗಲ ಕೇರಳ ಸಮಾಜಂ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದ ಉದ್ಘಾಟನೆಯನ್ನು ತಿಮ್ಮರಾಯಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ಕೆ.ಎಂ.ಶಿವಕುಮಾರ್ ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ-94492 43635, 8050570195 ಸಂಪರ್ಕಿಸಲು ಕೋರಿದ್ದಾರೆ.