ಮಳೆಗಾಗಿ ವಿಶೇಷ ಪೂಜೆ
ಹೊಸಕೋಟೆ: ಪಟ್ಟಣದ ಬಳಿಯ ಅಮಾನಿ ದೊಡ್ಡಕೆರೆಯ ಕಟ್ಟೆಯ ಮೇಲಿನ ಗಂಗಾ ಪರಮೇಶ್ವರಿ ದೇವರಿಗೆ ಮಳೆಗಾಗಿ ಸುತ್ತ ಮುತ್ತಲಿನ 10 ಗ್ರಾಮಗಳ ಭಕ್ತರು ಪ್ರತೀ ವರ್ಷದಂತೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಜುಲೈನಲ್ಲಿ ಭಕ್ತರು ಗ್ರಾಮಗಳಿಂದ ಕಲಶಗಳನ್ನು ಹೊತ್ತು ಮೆರವಣಿಗೆಯಲ್ಲಿ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ರೂಢಿಯಲ್ಲಿದೆ. ಗಂಗಾ ಪರಮೇಶ್ವರಿ ಸೇವ ಸಮಿತಿಯಿಂದ ಮಳೆಗಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಸುಮಾರು ಇಪ್ಪತೈದು ವರ್ಷಗಳ ಹಿಂದೆ ಅಮಾನಿ ದೊಡ್ಡ ಕೆರೆ ತುಂಬಿತ್ತು. ಇದುವರೆಗು ತುಂಬಿಲದ ಕಾರಣ ಈ ವಿಶೇಷ ಪೂಜೇ ಹಮ್ಮಿಕೊಳಲಾಯಿತು.