21ನೇ ವಾರ್ಷಿಕ ಮಹಾಸಭೆ
ದೇವನಹಳ್ಳಿ: ಇಲ್ಲಿನ ಎಎಸ್ವಿ ನಗರ್ತ ಸಂಘದ 21ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಶಾ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2013-15ನೇ ಸಾಲಿಗೆ ನೂತನ ಪದಾಧಿಕಾರಿಗಳ ಚುನಾವಣೆ ನಡೆದು ವೈ.ಪಿ. ವಿಜಯಕುಮಾರ್ ಅಧ್ಯಕ್ಷರಾಗಿ ಹಾಗೂ ಸಿ. ನಟರಾಜ್ ಅವರು ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.
ಎಸ್.ವಿ.ದೇವರಾಜ್, ಎನ್.ಮಂಜುನಾಥ್, ಚಂದ್ರಮೌಳಿ, ಬಿ.ವಿ. ನಾಗರಾಜ್, ಎ.ಮಂಜುನಾಥ್, ಪುಟ್ಟರುದ್ರಪ್ಪ, ವೈ.ಪಿ. ಪ್ರವೀಣ್ಕುಮಾರ್, ಶಾ.ಪ್ರಸಾದ್, ಚಂದ್ರಶೇಖರ್, ಎಸ್.ಎಸ್. ಮಲ್ಲಿಕಾರ್ಜುನ್, ಪುನೀತ್, ಪಿ.ಜಯಪ್ರಕಾಶ್ ಹಾಗೂ ರಜನೀಕಾಂತ್, ಅನ್ನಪೂರ್ಣಮ್ಮ ಮತ್ತು ಮಂಗಳಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.