ಇಂದು ಮಾಗಡಿ ಬಂದ್ಗೆ ಕರೆ
ಮಾಗಡಿ: ಜಿಲ್ಲಾ ಒಕ್ಕಲಿಗರ ವೇದಿಕೆ, ಮಾಗಡಿ ತಾಲೂಕು ಘಟಕದ ವತಿಯಿಂದ ಜು.20 ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಕೆಂಪೇಗೌಡ ಬಯಲು ರಂಗ ಮಂದಿರದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮೇಲೆ ಐಟಿ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿ ಮತ್ತು ಮಾಗಡಿ ಬಂದ್ಗೆ ಕರೆ ನೀಡಲಾಗಿದೆ ಎಂದು ಒಕ್ಕಲಿಗರ ವೇದಿಕೆ ಪ್ರಕಟಣೆ ತಿಳಿಸಿದರೆ. ಪ್ರತಿಭಟನಾ ರ್ಯಾಲಿಯಲ್ಲಿ ತಾಲೂಕಿನಾದ್ಯಂತ ಒಕ್ಕಲಿಗ ಸಮುದಾಯ ಭಾಗವಹಿಸುವಂತೆ ಕೋರಲಾಗಿದೆ.
ಮಹಾಶಿವಪೂಜಾ
ನೆಲಮಂಗಲ: ತಾಲೂಕಿನ ಸೋಂಪುರದ ಶ್ರೀ ಸಿದ್ದಲಿಂಗೇಶ್ವರ ಸಮುದಾಯ ಭವನದಲ್ಲಿ ವೀರಶೈವ ಮಹಾಸಭಾ ವತಿಯಿಂದ ಜುಲೈ 22ರ ಸೋಮವಾರದಂದು ಬೆಳಿಗ್ಗೆ 9-30ಕ್ಕೆ ಗುರುಪೌರ್ಣಿಮೆಯ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಮಹಾಶಿವಪೂಜಾ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ವೀರಶೈವ ಮಹಾಸಭಾ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.