ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೀವನದ ಭದ್ರತೆಗೆ ಉಳಿತಾಯ ಮಾಡಿ: ಆರ್. ಸುಧಾ

Rashmi Kasaragodu
Updated On : 20 Jul 2013, 12:56 pm

ಮಾಗಡಿ: ನಾಗರಿಕರು ಜೀವನದ ಭದ್ರತೆಗೆ ಉಳಿತಾಯದ ಹಣವನ್ನು ಭಾರತೀಯ ಜೀವವಿಮೆಯಲ್ಲಿ ತೊಡಗಿಸುವುದು ಭವಿಷ್ಯದಲ್ಲಿ ಅತ್ಯಾವಶ್ಯಕವಾದುದು ಎಂದು ಭಾರತೀಯ ಜೀವ ವಿಮಾ ನಿಗಮದ ಚೇರ್ಮನ್  ಕ್ಲಬ್ ಸದಸ್ಯೆ  ಆರ್. ಸುಧಾ  ನುಡಿದರು.
ಅವರು ಪಟ್ಟಣದ  ಭಾರತೀಯ ಜೀವ ವಿಮಾ ಸ್ಯಾಟಲೈಟ್ ಶಾಖೆಯಲ್ಲಿ ಒಂದೇ ದಿನ 105 ಮಂದಿಯ ಉಳಿತಾಯ ಪಾಲಿಸಿ ಮಾಡಿಸಿದ ದಾಖಲೆಯ ಪಾಲಿಸಿಗಾಗಿ ಶಾಖಾ ಕಚೇರಿ ವತಿಯಿಂದ ಸನ್ಮಾನದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ಇಂದು ಕೂಡಿಟ್ಟ ಹಣ ನಾಳಿನ ನೆಮ್ಮದಿಯ ಜೀವನಕ್ಕಾಗುತ್ತದೆ. ನಾಗರಿಕರು ದುಂದು ವೆಚ್ಚ ಮಾಡದೆ ಹಾಗೂ ದುಷ್ಚಟಗಳಿಗೆ ಬಲಿಯಾಗದೆ ದುಡಿದು ಕೂಡಿಟ್ಟು ಉಳಿಸಿದ ಹಣವನ್ನು ಭಾರತೀಯ ಜೀವ ವಿಮೆಯಲ್ಲಿ ತೊಡಗಿಸುವುದು ಸೂಕ್ತ. ಸಂದ್ಯಾಕಾಲಕ್ಕೆ ಸಹಕಾರಿಯಾಗುತ್ತದೆ. ಬಾಳಿನ್ನುದ್ದಕ್ಕೂ ಭವಿಷ್ಯ ಉತ್ತಮವಾಗಿರುತ್ತದೆ ಎಂದರು. ಶಾಖಾಧಿಕಾರಿ ಸಲೀಂ ಬೇಗ್ ಭಾರತೀಯ ಜೀವ ವಿಮೆ ಬಡವರ ಪಾಲಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಸಕ್ರಿಯವಾಗಿದೆ ಎಂದರು. ಶಾಖಾಧಿಕಾರಿ ಎನ್. ಚೆನ್ನಪ್ಪ, ಅಭಿವೃದ್ಧಿ ಅಧಿಕಾರಿಗಳಾದ ಬಿ.ಎಲ್. ಪ್ರಸಾದ್ ರಾವ್,  ಎಚ್.ಎನ್. ವಾಸುದೇವ್ ರಾವ್, ಡಿ.ಎನ್.ಮುರಳಿ, ಎಂ.ರಾಚಯ್ಯ, ಕೃಷ್ಣಮೂರ್ತಿ, ಎಚ್.ಶಿವಕುಮಾರ್, ಎನ್. ಕೇಶವಮೂರ್ತಿ, ಗೌರಮ್ಮ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement