ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾಳೆ ಅರ್ಚಕರಿಗೆ ಪತ್ರ ವಿತರಣೆ

Rashmi Kasaragodu
Updated On : 20 Jul 2013, 12:58 pm

ಮಾಗಡಿ: ತಾಲೂಕು ಮುಜರಾಯಿ  ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಸಂಘದ ನೇತೃತ್ವದಲ್ಲಿ ಆಗಮ ತರಬೇತಿ ಪಡೆದ ಅರ್ಚಕರಿಗೆ  ಪತ್ರ ವಿತರಣೆ, ಉಚಿತ 3 ಜೊತೆ ಪಂಚೆ, ಶಲ್ಯ ವಿತರಣೆ ಹಾಗು ತಸ್ಥಿಕ್ ಹೆಚ್ಚಳದ  ಆದೇಶ ಪ್ರತಿಗಳ ವಿತರಣಾ ಸಮಾರಂಭ ಜು.21 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಶ್ರೀ ಸೋಮೇಶ್ವರ ಬಡಾವಣೆಯಲ್ಲಿ ಆಯೋಜಿಸಲಾಗಿದೆ ಎಂದು ಅರ್ಚಕರ ಸಂಘದ ಅಧ್ಯಕ್ಷ ಎ.ಕೃಷ್ಣಪ್ಪ ತಿಳಿಸಿದ್ದಾರೆ.ಕಂಚಗಲ್ ಬಂಡೇಮಠದ ಮಠಾಧೀಶ ಬಸವಲಿಂಗಸ್ವಾಮಿ, ಮೂಡಲ ಮಠದ ಪಂಚಾಕ್ಷರಿ ಸ್ವಾಮಿ ಸಾನಿದ್ಯ ವಹಿಸಲಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ್  ಡಾ. ಬಿ.ಆರ್.ಹರೀಶ್ ನಾಯಕ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್,  ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ಎಂ. ರಾಮಣ್ಣ, ಶಾಂತಮ್ಮ  ನರಸಿಂಹಮೂರ್ತಿ, ಆಗಮಿಕ ಗೋಪಾಲ್ ದೀಕ್ಷಿತ್,  ಧಾರ್ಮಿಕ ದತ್ತಿ ತಹಸೀಲ್ದಾರ್ ಲಕ್ಷ್ಮೀನಾರಾಯಣ್, ಮುಜರಾಯಿ ಪತ್ರಿಕೆ ಸಂಪಾದಕ ಮಲ್ಲೇಶ ಚಾರ್, ಮುಜರಾಯಿ ಜಿಲ್ಲಾ ಅಧೀಕ್ಷಕ ವೆಂಕಟೇಶ್ ಮೂರ್ತಿ, ಅರ್ಚಕರ ಸಂಘದ ಮಾಜಿ ಅಧ್ಯಕ್ಷ ಗೋವಿಂದರಾಜು ಇತರರು ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ರಂಗನಾಥ್ ತಿಳಿಸಿದ್ದಾರೆ.
ಉಚಿತ ಹೊಲಿಗೆ
ತರಬೇತಿ ಶಿಬಿರ
ರಾಮನಗರ: ಭಾರತ ಸರ್ಕಾರದ ಜವಳಿ ಮಂತ್ರಾಲಯ ಅಧೀನದ ಅಪೇರಲ್ ಟ್ರೈನಿಂಗ್ ಅಂಡ್ ಡಿಸೈನ್ ಕೇಂದ್ರವು ಜಿ.ಪಂ. ಸಹಯೋಗದೊಂದಿಗೆ ಗ್ರಾಮೀಣ ಮಹಿಳೆಯರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಉಚಿತ ಹೊಲಿಗೆ ತರಬೇತಿ ನೀಡಿ ಉದ್ಯೋಗವನ್ನು ಕಲ್ಪಿಸುತ್ತಿದೆ.ಸಂಸ್ಥೆಯು ನವದೆಹಲಿಯ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಹಾಗೂ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ನಡೆಸುವ ಒಂದು ತಿಂಗಳ ಸ್ಮಾರ್ಟ್ ಆಪರೇಟರ್ ಬೇಸಿಕ್ ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿ ಹಿಂದುಳಿದ ವರ್ಗದವರಾಗಿರಬೇಕು. 5ನೇ ತರಗತಿ ಪಾಸಾಗಿದ್ದು, 18 ರಿಂದ 35 ವರ್ಷದೊಳಗಿರಬೇಕು. ವಾರ್ಷಿಕ ಆದಾಯ ರು.40 ಸಾವಿರ ಮೀರಿರಬಾರದು.ಅರ್ಹ ಅಭ್ಯರ್ಥಿಗಳು ಎಟಿಡಿಸಿ ತರಬೇತಿ ಸಂಸ್ಥೆ, 3ನೇ ಮಹಡಿ, ಸಿಎಂಸಿ ಕಾಂಪ್ಲೆಕ್ಸ್, ವಿಜಯ ಬ್ಯಾಂಕ್ ಹತ್ತಿರ, ರಾಮನಗರ ವಿಳಾಸಕ್ಕೆ ಖುದ್ದಾಗಿ ಮೂಲದಾಖಲಾತಿಗಳು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಜು.25ರೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ದೂ 080-27273778 ಸಂಪರ್ಕಿಸುವಂತೆ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಜಿಲ್ಲಾ ಹೋರಾಟ:
ಇಂದು ಸಭೆ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಬೇಕು ಎಂಬ ಒತ್ತಾಯಕ್ಕೆ ಈಗ ಎಲ್ಲ ವಲಯಗಳ ಬೆಂಬಲ ವ್ಯಕ್ತವಾಗುತ್ತಿದೆ. ಈ ಸಂಬಂಧ ಹೋರಾಟದ ರೂಪರೇಷೆಗಳನ್ನು ಕುರಿತು ಚರ್ಚಿಸಲು ಇಲ್ಲಿನ ವಕೀಲರ ಸಂಘದ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ಜು.20ರ ಶನಿವಾರ ಮಧ್ಯಾಹ್ನ 2.30ಕ್ಕೆ ಸಭೆ ಕರೆಯಲಾಗಿದೆ ಎಂದು ಸಂಘದ ಕಾರ್ಯದರ್ಶಿ ಬೈರೇಗೌಡ ತಿಳಿಸಿದ್ದಾರೆ.
ಕಳೆದ ಸುಮಾರು ದಶಕಗಳಿಂದ ಉಪವಿಭಾಗ ಕೇಂದ್ರವಾಗಿರುವ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ಬಹುದಿನದ ಬೇಡಿಕೆಗೆ ಸರ್ಕಾರ ಪೂರಕ ಪ್ರತಿಕ್ರಿಯೆ ನೀಡಿಲ್ಲ. ಕೆಲ ರಾಜಕೀಯ ಇಚ್ಛಾಶಕ್ತಿಗಳಿಗೆ ಮಣಿದು ಜಿಲ್ಲಾ ಕೇಂದ್ರ ಘೋಷಣೆ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ನಡೆಯುತ್ತಿದೆ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದ್ದು, ಹೋರಾಟದ ಸ್ವರೂಪ ನಿರ್ಧಾರಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಅಭಿನಂದನೆ
ಕೋಲಾರ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ನಾಮಕರಣವನ್ನು ಜಿಲ್ಲಾ ಒಕ್ಕಲಿಗರ ಸಂಘ ಸ್ವಾಗತಿಸಿ, ಅಭಿನಂದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement