ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಫ್ಯೂಚರ್ವೆಲ್ ಸಂಸ್ಥೆ ಕಚೇರಿ ಪೊಲೀಸ್ ವಶಕ್ಕೆ

Rashmi Kasaragodu
Updated On : 20 Jul 2013, 12:41 pm

ಚನ್ನಪಟ್ಟಣ: ಮುಡಾ ಮತ್ತು ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಕೋಟ್ಯಂತರ ರು. ಹಣ ಗೋಲ್ ಮಾಲ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನಾಗಲಿಂಗಸ್ವಾಮಿ ಒಡೆತನಕ್ಕೆ ಸೇರಿದ್ದ
ಫ್ಯೂಚರ್ವೆಲ್ ಸಂಸ್ಥೆಯ ಕಚೇರಿಯನ್ನು ವಶಕ್ಕೆ ತೆಗೆದುಕೊಂಡ ಮಂಡ್ಯ ಪೊಲೀಸರು ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ.
ಪಟ್ಟಣದ 6ನೇ ಅಡ್ಡರಸ್ತೆಯಲ್ಲಿದ್ದ ಫ್ಯೂಚರ್ವೆಲ್ ಪಾಮ್ಸ್ ಅಂಡ್ ಇನ್ವೆಸ್ಟ್ಮೆಂಟ್ ಕಚೇರಿಗೆ ಆರೋಪಿ ನಾಗಲಿಂಗಸ್ವಾಮಿಯೊಂದಿಗೆ ಆಗಮಿಸಿದ ಮಂಡ್ಯ ಡಿವೈಎಸ್ಪಿ ಶೋಭಾರಾಣಿ ನೇತೃತ್ವದ ತಂಡ ಕೆಲಕಾಲ ಕಚೇರಿಯನ್ನು ಪರಿಶೀಲನೆ ನಡೆಸಿ ಅಲ್ಲಿನ ದಾಖಲೆಗಳನ್ನು ವಶಪಡಿಸಿಕೊದ್ದಾರೆ.
ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಕಚೇರಿ ಆರಂಭಿಸಿದ್ದ ನಾಗಲಿಂಗಸ್ವಾಮಿ ಹಣಕಾಸು ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನು ಇಲ್ಲಿಂದಲೇ ನಿರ್ವಹಿಸುತ್ತಿದ್ದ.
ಮಂಡ್ಯ ಮತ್ತು ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಪಟಾಯಿಸಿದ ಹಣವನ್ನು ಇಲ್ಲಿ ಹೂಡಿಕೆ ಮಾಡಿದ್ದಾಗಿ ಪೊಲೀಸರು ಶಂಕಿಸಿದ್ದಾರೆ.
ಕಚೇರಿಯಲ್ಲಿದ್ದ ಕಡತಗಳು ಮತ್ತು ಕಂಪ್ಯೂಟರ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಪೂರ್ಣ ಗೊಳ್ಳುವವರೆಗೆ ಕಚೇರಿಯ ಬೀಗ ತೆರೆಯದಂತೆ ಮಂಡ್ಯ ಪೊಲೀಸರು ಅಂಗಡಿಯ ಮಾಲೀಕರಿಗೆ ತಾಕೀತು ಮಾಡಿದ್ದಾರೆ. ಇದೇ ವೇಳೆ ಕಚೇರಿ ಬಾಡಿಗೆಗೆ ನೀಡಿದ್ದ ಮುಂಗಡ ಹಣ 1.80 ಲಕ್ಷ ರು. ಸಾರ್ವಜನಿಕರದ್ದಾಗಿದ್ದು ಈ ಹಣವನ್ನು ಮಾಲೀಕರಿಂದ ಹಿಂದಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement