ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಹೆಸರು: ಸ್ವಾಗತ

Rashmi Kasaragodu
Updated On : 20 Jul 2013, 12:41 pm

ಮಾಗಡಿ: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರಕ್ಕೆ ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕ ಎಚ್.ಸಿ. ಬಾಲಕೃಷ್ಣ, ಕೆಪಿಸಿಸಿ ಸದಸ್ಯ ಎ.ಮಂಜು, ಪುರಸಭಾ ಸದಸ್ಯ ಎಂ.ಎನ್. ಮಂಜು, ಬಿಸ್ಕೂರು ಸುಹೇಲ್ ಸೇರಿದಂತೆ ನೂರಾರು ಕಾಂಗ್ರೆಸ್  ಮುಖಂಡರು ಇತರರು ಸ್ವಾಗತಿಸಿದ್ದಾರೆ.
ರಾಮಕೃಷ್ಣಯ್ಯ
ಅವಿರೋಧ ಆಯ್ಕೆ
ಮಾಗಡಿ: ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಮಕೃಷ್ಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಗೆ ಸಹಕರಿಸಿದ ಕೆಂಪೇಗೌಡ, ಕೆ.ಎಚ್.ಲೋಕೇಶ್ ತಂಡಕ್ಕೆ ರಾಮಕೃಷ್ಣಯ್ಯ ಅಭಿನಂದನೆ ಸಲ್ಲಿಸಿದರು.
ಕುಮಾರ್ಗೆ ಸನ್ಮಾನ
ಮಾಗಡಿ: ತಾಲೂಕಿನ ಚಕ್ರಭಾವಿ ಸರ್ಕಾರಿ ಶಾಲಾಭಿವೃದ್ಧಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಕುಮಾರ್  ಅವರನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರಿಂದ ಗೌರವ ಸ್ವೀಕರಿಸಿದ ಕುಮಾರ್ ಮಾತನಾಡಿ  ಶಾಲಾಭಿವೃದ್ಧಿಗೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಭೈರಪ್ಪ, ಚಂದ್ರಶೇಖರ್, ಸಿ.ಡಿ. ಲೋಕೇಶ್, ಮುಖ್ಯಶಿಕ್ಷಕ ಹನುಮಂತಯ್ಯ, ಸಹ ಶಿಕ್ಷಕರು, ಸಮಿತಿ ಸದಸ್ಯರು ಇದ್ದರು.
ಅಶೋಕ್ ಅಧ್ಯಕ್ಷ
ಕನಕಪುರ: ಕನಕಪುರ ತಾಲೂಕು ವಕೀಲರ ಸಂಘದ ದ್ವೈವಾರ್ಷಿಕ ಚುನಾವಣೆ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಏಳಗಳ್ಳಿ ಹೆಚ್.ಎಸ್.ಅಶೋಕ್ ಬಹುಮತದಿಂದ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಎಸ್.ವಿ. ವೀರಪ್ಪ, ಕಾರ್ಯದರ್ಶಿಯಾಗಿ ಸಿ.ಎಂ.ಜಗದೀಶ್, ಖಜಾಂಚಿಯಾಗಿ ಟಿ.ಎಸ್.ಅನಿತಾ ಆಯ್ಕೆಗೊಂಡರು. ವಕೀಲರ ಸಂಘದ ನಿರ್ದೇಶಕರುಗಳಾಗಿ ನ್ಯಾಯವಾದಿಗಳಾದ ಎಂ.ಮಹದೇವಯ್ಯ, ಎಂ.ವಿ. ಪ್ರಮೀಳಾ, ವೈರಮುಡಿ, ಎಚ್.ವಿ.ವೀರಭದ್ರಸ್ವಾಮಿ, ಎಸ್.ಕಾಂತರಾಜು, ಎಸ್. ಮರಿಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಜೆ.ಮಹದೇವ್ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement