ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಐಟಿ ದಾಳಿಗೆ ಖಂಡನೆ

Rashmi Kasaragodu
Updated On : 21 Jul 2013, 1:22 am

ಕ.ಪ್ರ. ವಾರ್ತೆ  ಆನೇಕಲ್ಲು  ಜು.20
ರಾಜ್ಯದ ಆದಿಚುಂಚನಗಿರಿ ಶಾಖಾ ಮಠ ಹಾಗೂ ಅದರ ಅಂಗ ಸಂಸ್ಥೆಗಳ ಮೇಲಿನ ಐಟಿ ದಾಳಿ ಖಂಡಿಸಿ ತಾಲೂಕು ಒಕ್ಕಲಿಗ ಸಮುದಾಯದ ಮುಖಂಡರು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಗಡಿಯಲ್ಲಿ ರಸ್ತೆ ತಡೆ ನಡೆಸಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮೇಗೌಡ ಮಾತನಾಡಿ, ಈ ದಾಳಿಯ ಹಿಂದ ಕಾಂಗ್ರೆಸ್ ಸರ್ಕಾರದ ಪಿತೂರಿ ಇದ್ದು, ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿನ ಪ್ರತಿ ಮೂಲೆಯಲ್ಲೂ ಶಿಕ್ಷಣ, ಆರೋಗ್ಯ ಹಾಗೂ ಸಂಸ್ಕಾರ ನೀಡುತ್ತಿರುವ ಬೃಹನ್ಮಠದ ವಿಚಾರದಲ್ಲಿ ಹಗುರವಾಗಿ ನಡೆದುಕೊಂಡಿರುವ ಸರ್ಕಾರದ ಬಗ್ಗೆ ಮುಂದಿನ ದಿನಗಳಲ್ಲಿ ಜನತೆ ಉತ್ತಮ ತೀರ್ಮಾನ ನೀಡಲಿದ್ದಾರೆ ಎಂದರು.
ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ರು.ಗಳ 2ಜಿ ಹಗರಣ ಸೇರಿದಂತೆ ನಾಲ್ಕೂರು ಹಗರಣಗಳ ತಂದೆಯಾಗಿದ್ದು, ಅಲ್ಲಿನ ಸಂಸ್ಥೆ ಹಾಗೂ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲಿ. ಅದು ಬಿಟ್ಟು ಈ ಕೆಟ್ಟ ಚಾಳಿ ಮುಂದುವರಿಸಿದಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾದೀತೆಂದು ಎಚ್ಚರಿಸಿದರು.
ಹೊಸೂರು ಮಾಜಿ ಶಾಸಕ ವೆಂಕಟಸ್ವಾಮಿ ತಾಲೂಕು ಮುಖಂಡರಾದ ಮಾಜಿ ರವಿ, ಹಾರಗದ್ದೆ ಗೋಪಿ, ರಘು, ಇಗ್ಗಲೂರು ವೆಂಕಟೇಶ್ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು. ರಸ್ತೆ ತಡೆಯಿಂದಾಗಿ ಕೆಲ ಕಾಲ ವಾಹನ ಸಂಚಾರ ಅಸ್ಥವ್ಯಸ್ತವಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement