ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಹಸೀಲ್ದಾರ್ ಕಚೇರಿ ಮೇಲೆ ಲೋಕಾ ದಾಳಿ

Rashmi Kasaragodu
Updated On : 21 Jul 2013, 1:21 am

ಹೊಸಕೋಟೆ: ಜಾತಿ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ ನೋಂದಣಿ ಮತ್ತು ವಿತರಣೆ ಮಾಡಲು ಸಾರ್ವಜನಿಕರಿಂದ ಲಂಚ ಪಡೆಯಲಾಗುತ್ತಿದೆ ಎಂಬ ದೂರಿನ ಮೇರಿಗೆ ಲೋಕಾಯುಕ್ತ ಪೊಲೀಸರು ಹೊಸಕೋಟೆ ತಹಸೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿ 1.57ಲಕ್ಷ ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆಸಿದ ಪೊಲೀಸರು, ಕಚೇರಿಯಲ್ಲಿನ ವಿವಿಧ ಶಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಪರಿಶೀಲಿಸಿದಾಗ 1,57,655 ದಾಖಲೆರಹಿತ ಹಣ ಪತ್ತೆಯಾಗಿದೆ. ಹಣದ ಬಗ್ಗೆ ಸಿಬ್ಬಂದಿ ಮಾಹಿತಿ ನೀಡದ ಕಾರಣ ಸಿಬ್ಬಂದಿ ಬಳಿ ದೊರಕಿದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಕಾಲ ವಿಭಾಗ, ಹಕ್ಕು ದಾಖಲೆ ಶಾಖೆ, ಸಾಮಾಜಿಕ ಭದ್ರತಾ ವಿಭಾಗ, ಎಲ್ಎನ್ಡಿ ಶಾಖೆಯ ದರಖಾಸ್ತು ಪೋಡಿ ವಿಭಾಗ, ಭೂ ಪರಿವರ್ತನೆ ಶಾಖೆಗಳಲ್ಲಿನ ಬಾಕಿ ಇರುವ ಅರ್ಜಿಗಳ ದೃಢೀಕೃತ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆಗಾಗಿ ವಶಕ್ಕೆ ಪಡೆದಿದ್ದಾರೆ ಪೊಲೀಸ್ ಅಧೀಕ್ಷಕರಾದ ಡಾ.ಅಶ್ವಿನಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಟಿ.ಡಿ. ದುರ್ಗಯ್ಯ, ಪೊಲೀಸ್ ಇನ್ಸ್ಪೆಕ್ಚರ್ ವಜೀರ್ ಆಲಿಖಾನ್, ಗೌತಮ್, ಸುಬ್ರಮಣ್ಯ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ದಾಳಿ ನಡೆಸಿ ಕಾರ್ಯಚರಣೆ ನಡೆಸಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement