ದಾಬಸ್ಪೇಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ
ಕನ್ನಡಪ್ರಭ ವಾರ್ತೆ, ನೆಲಮಂಗಲ, ಜು.20
ಬೃಹತ್ ಕೈಗಾರಿಕಾ ಪ್ರದೇಶವಾಗಿ ಬೆಳೆಯುತ್ತಿರುವ ದಾಬಸ್ಪೇಟೆಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.
ಶನಿವಾರ ತಾಲೂಕಿನ ದಾಬಸ್ಪೇಟೆಯಲ್ಲಿ ಸುವರ್ಣ ಗ್ರಾಮ ಯೋಜನೆಯಡಿಯ ಸೋಂಪುರದ ಹೆದ್ದಾರಿ 4ರಿಂದ ಸುಮಾರು 300 ಅಡಿಯ ಉದ್ದಕ್ಕೂ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಗ್ರಾಮ ಎಂದರೆ ದಾಬಸ್ಪೇಟೆ. ಇಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗುತ್ತಿರುವುದರಿಂದ ಸಹಜವಾಗಿಯೇ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ನೀರು, ಚರ
ಸೋಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ತೀರ್ಥಪ್ರಸಾದ್ ಮಾತನಾಡಿದರು. ಧನಲಕ್ಷ್ಮಿ, ಜಿಪಂ ಸದಸ್ಯೆ ಸುನಂದ ಶಿವಕುಮಾರ್, ತಾಪಂ ಸದಸ್ಯ ವೀರಯ್ಯ, ತಾಪಂ ಮಾಜಿ ಸದಸ್ಯ ರಾಮಕೃಷ್ಣಯ್ಯ, ಮುಖಂಡರಾದ ಪರಮೇಶ್, ವೆಂಕಟೇಶ್, ಜಯಣ್ಣ, ಜಗಜ್ಯೋತಿ ಬಸವೇಶ್ವರ, ಮೋಹನ್ಕುಮಾರ್, ಗ್ರಾಪಂ ಸದಸ್ಯರಾದ ಶ್ರೀದೇವಿ, ಮಂಗಳಮ್ಮ, ಪಂಚಾಯತ್ ರಾಜ್ ಸಹಾಯಕ ಕಾರ್ಯಪಾಲಕ ಎಂ.ಎನ್. ಶಂಕರನಾರಾಯಣ್, ಸಹಾಯಕ ಅಭಿಯಂತರ ಶಿವರಾಮ್, ಪಿಡಿಒ ಮುರಡಯ್ಯ, ಕಾರ್ಯದರ್ಶಿ ಕೆಂಪರಂಗಯ್ಯ, ಶ್ರೀನಿವಾಸ್ ಇದ್ದರು.