50 ಪೈಸೆಗೆ ರಾಗಿ ಜೋಳ ವಿತರಿಸಲು ವಾಟಾಳ್ ಆಗ್ರಹ
ಬೆಂಗಳೂರು: ಸರ್ಕಾರ ಕಡಿಮೆ ದರದಲ್ಲಿ ಅಕ್ಕಿ ನೀಡುತ್ತಿರುವಂತೆ 50 ಪೈಸೆಗೆ ಜೋಳ ಮತ್ತು ರಾಗಿಯನ್ನು ನೀಡುವ ಯೋಜನೆಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅನ್ನಕ್ಕಿಂತ ಮುದ್ದೆ- ರೊಟ್ಟಿ ಎಲ್ಲರಿಗೂ ಬೇಕು. ಉತ್ತರ ಕರ್ನಾಟಕದಲ್ಲಂತೂ ಜೋಳ ಬೇಕೇ ಬೇಕು. ಜೋಳದ ರೊಟ್ಟಿ ಹೆಚ್ಚು ಜನರು ಸೇವಿಸುವುದರಿಂದ ಸರ್ಕಾರ ಕಡಿಮೆ ದರದಲ್ಲಿ ಜೋಳ ನೀಡಬೇಕು. ರಾಗಿ ಮುದ್ದೆ ಎಲ್ಲರಿಗೂ ಬೇಕಾದಂತಹ ಆಹಾರ. ರಾಗಿ ಮುದ್ದೆ ಆರೋಗ್ಯಕರವಾದದ್ದು, ಅದರಲ್ಲೂ ಹಳೇ ಮೈಸೂರು ರಾಜ್ಯಕ್ಕೆ ರಾಗಿ ಮುದ್ದೆ ಬೇಕೇ ಬೇಕು ಅಂದ ಮೇಲೆ ಒಂದು ಕೆ.ಜಿ. ರಾಗಿಗೆ 50 ಪೈಸೆಯಂತೆ ಹಳೇ ಮೈಸೂರು ಪ್ರದೇಶಕ್ಕೆ ರಾಗಿ ಹಂಚಬೇಕು ಎಂದು ವಾಟಳ್ ಒತ್ತಾಯಿಸಿದ್ದಾರೆ.