ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾರದ ಪುಡಿ ಎರಚಿ ದರೋಡೆ: ನಾಲ್ವರ ಸೆರೆ

Rashmi Kasaragodu
Updated On : 22 Jul 2013, 1:21 am

ಕ.ಪ್ರ ವಾರ್ತೆ ಸೂಲಿಬೆಲೆ ಜು.21
ಬ್ಯಾಂಕಿನಿಂದ ಹಣ ತೆಗೆದುಕೊಂಡು   ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಗುಂಪೊಂದು ಕಾರದ ಪುಡಿ ಎರಚಿ 3.70 ಲಕ್ಷ ರು.ಗಳನ್ನು ದರೋಡೆ ಮಾಡಿಕೊಂಡು ಹೋದ ಘಟನೆ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ಮಿಂಚಿನ ಕಾರ್ಯಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕಾಳಪ್ಪನಹಳ್ಳಿಯ ನಾಗರಾಜ್ ಎಂಬಾತ ನರಸಾಪುರ ಗ್ರಾಮದ ಬಳಿ ಗುತ್ತಿಗೆದಾರ ಕೆಲಸ ಮಾಡುತ್ತಿದ್ದು, ಇಲ್ಲಿನ ಕೂಲಿಯಾಳುಗಳಿಗೆ ಹಣ ನೀಡಲೆಂದು ಹೊಸಕೋಟೆ ಆಕ್ಸಿಸ್ಸ್ ಬ್ಯಾಂಕಿನಲ್ಲಿ ರು.3.75 ಲಕ್ಷ ರು.ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿರುವಾಗ ಮುಗಬಾಳದ ಬಳಿ ಬೈಕಿ ಅಡ್ಡ ಹಾಕಿದ ಯುವಕರ ಗುಂಪೊಂದು ಕಾರದ ಪುಡಿ ಎರಚಿ ಕಬ್ಬಿಣದ ರಾಡಿನಿಂದ ಹೊಡೆದು ಹಣವನ್ನು ದೋಚಿ ಪರಾರಿಯಾಗಿದ್ದರು.
ಭಾಮೈದನ ಕೃತ್ಯ:  ನಾಗರಾಜು ಬಳಿ ಕೆಲಸ ಮಾಡುತ್ತಿದ್ದ ದೇವರಾಜು ಎಂಬಾತ ನಾಗರಾಜುಗೆ ಭಾವೈದನಾಗಬೇಕು. ತನ್ನ ಮಾವ ಹಣ ತೆಗೆದುಕೊಂಡು ಬರುವ ವಿಚಾರ ತಿಳಿದ್ದ ದೇವರಾಜು ತನ್ನ ಸ್ನೇಹಿತರಾದ ಹರೀಶ,ಅಂಬರೀಷ, ಮಂಜುನಾಥ, ಶಂಕರ ಹಾಗೂ ಶಶಿಕುಮಾರ್ ಅವರಿಗೆ ಮೊದಲೇ ವಿಚಾರ ತಿಳಿಸಿ ಹಣ ತೆಗೆದುಕೊಂಡು ಬೈಕಿನಲ್ಲಿ ಬರುತ್ತೇವೆ. ಬೈಕಿನ ಚಾಲನೆ ನಾನೇ ಮಾಡುತ್ತಿರುತ್ತೇನೆ. ಮುಗಬಾಳ ಬಳಿ ಕಾರದ ಪುಡಿ ಹಾಕಿ. ಆಗ ನಾನು ಕೆಳಗೆ ಬೀಳುತ್ತೇನೆ.ಹಲ್ಲೆ ನಡೆಸಿ ಹಣ ದೋಚಿಕೊಂಡು ಹೋಗಿ. ಆಮೇಲೆ ಬಂದು ನಾನು ಹಣ ಪಡೆಯುತ್ತೇನೆ ಎಂದು ಸ್ನೇಹಿತರೊಂದಿಗೆ ಸಂಚು ರೂಪಿಸಿ ದರೋಡೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ನೀಡಲು ಬಂದಿದ್ದ: ದರೋಡೆ ನಡೆಸಿದ ನಂತರ ಏನು ಅರಿಯದವನಂತೆ ನಾಗರಾಜುನೊಂದಿಗೆ ನಂದಗುಡಿಗೆ ಬಂದ ದೇವರಾಜು ಪೊಲೀಸರಿಗೆ ದೂರು ನೀಡಲು ಸಹಕರಿಸಿದ್ದ. ನಂತರ ಆತ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಸಿಪಿಐ ಸಂಪತ್ ನೇತೃತ್ವದಲ್ಲಿ ಪಿಎಸ್ಐ ನವೀನ್ ಕುಮಾರ ಮತ್ತು ತಂಡ ಆರೋಪಿಗಳ ಮೊಬೈಲು ಕರೆಯ ಜಾಡು ಹಿಡಿದು ಪ್ರಕರಣ ಭೇದಿಸಿದ್ದಾರೆ. ಉಳಿದ ಆರೋಪಿಗನ್ನು  ಬಂಧಿಸಿದ್ದು ಬಂಧಿತರಿಂದ ಬೈಕುಗಳ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement