ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಾಹನ ಡಿಕ್ಕಿ: ಸ್ಥಳದಲ್ಲೇ ಮಗು ಸಾವು

Rashmi Kasaragodu
Updated On : 22 Jul 2013, 1:22 am

ಮಾಗಡಿ: ರಸ್ತೆ ಅಪಘಾತದಲ್ಲಿ ಮಗುವೊಂದು ಮೃತಪಟ್ಟ ಘಟನೆ ತಾಲೂಕಿನ ಮತ್ತೀಕೆರೆ ಗ್ರಾಮದ ಬಳಿ ಭಾನುವಾರ ನಡೆದಿದೆ. ಮತ್ತೀಕೆರೆ ನಾಗರಾಜು ಅವರು ಪುತ್ರ  ಶಶಾಂಕ್ (4) ಮೃತಪಟ್ಟ ದುರ್ದೈವಿ. ಮತ್ತೀಕೆರೆ ಬಳಿ ರಸ್ತೆ ದಾಟುತ್ತಿದ್ದಾಗ ಟಾಟಾ ಸುಮೋ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮಾಗಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದಿಮ್ಮಿ ಉರುಳಿ ವ್ಯಕ್ತಿ ಸಾವು
ಮಾಗಡಿ: ಮರದ ದಿಮ್ಮಿಯನ್ನು ಲಾರಿಗೆ ತುಂಬುತ್ತಿದ್ದಾಗ ಆಕಸ್ಮಿಕವಾಗಿ ಲಾರಿಯಿಂದ ಮರದ ದಿಮ್ಮಿ ಉರುಳಿಬಿದ್ದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ದುಂಡಿಗೇಪುರದಲ್ಲಿ ಭಾನುವಾರ ನಡೆದಿದೆ. ಕೆಂಪಸಾಗರದ ಬಸವರಾಜು (50) ಮೃತಪಟ್ಟ ದುರ್ದೈವಿ. ಬಸವರಾಜು ಎಂಬುವರ ದಂಡಿಗೇಪುರದಲ್ಲಿ ಮರ ಖರೀದಿಸಿದ್ದರು. ಭಾನುವಾರ ಮರ ಕೊಯ್ಲು ಮಾಡಿ ದಿಮ್ಮಿಗಳನ್ನು ಲಾರಿಗೆ ತುಂಬಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಮರಳು ಅಡ್ಡೆ ಮೇಲೆ ದಾಳಿ
ನೆಲಮಂಗಲ: ತಾಲೂಕಿನ ಶಿವಗಂಗೆಯ ಸಮೀಪವಿರುವ ಗೌರಾಪುರ ಗ್ರಾಮದ ಸುತ್ತ ಮುತ್ತ ಸರ್ಕಾರಿ ಮತ್ತು ಕಂದಾಯ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಮಾಡುತ್ತಿದ್ದ ಅಡ್ಡೆ ಮೇಲೆ ದಾಬಸ್ಪೇಟೆ ಸಬ್ಇನ್ಸ್ಪೆಕ್ಟರ್ ರವಿ  ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದರು. ಪೊಲೀಸರ ದಾಳಿ ಸೂಕ್ಷ್ಮತೆ ಅರಿತು ಮರಳು ಫಿಲ್ಟರ್ ಮಾಡುತ್ತಿದ್ದವರು ಸ್ಥಳದಿಂದ ಕಾಲ್ಕಿತ್ತಿದ್ದರು. ಇದರಿಂದ ಸ್ಥಳದಲ್ಲಿ ಯಾವುದೇ ಉಪಕರಣ ಮತ್ತು ಯಂತ್ರಗಳು ಸಿಗಲಿಲ್ಲ. ಅಕ್ರಮ ಮರಳು ತಯಾರಿಕೆಗೆ ಮುಂದಾದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ರವಿ ಎಚ್ಚರಿಸಿದ್ದರು.
ಯೋಗ ತರಬೇತಿ
ಹೊಸಕೋಟೆ: ಸ್ವಾಮಿ ವಿವೇಕಾನಂದ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ 9ನೇ ಉಚಿತ ಯೋಗ ತರಬೇತಿ ಶಿಬಿರ ಪಟ್ಟಣದ ತಮ್ಮೇಗೌಡ ಬಡಾವಣೆಯ ಸ್ತ್ರೀ ಶಕ್ತಿ ಮಹಿಳಾ ಮಾರುಕಟ್ಟೆ ಮಳಿಗೆ ಆವರಣದಲ್ಲಿ ಜು. 22ರಿಂದ ಆರಂಭವಾಗಳಿದೆ. 40 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ಕಾಯಿಲೆಗಳಿಂದ ಮುಕ್ತಿ ಹೊಂದಲು ತರಬೇತಿ ಸಹಕಾರಿಯಾಗಲಿದೆ. ಮೊ. 9901008668, 9880153385 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement