ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೌಕರರ ಸಂಘದ ಫಲಿತಾಂಶ ಪ್ರಕಟ

Vishwanath S
Updated On : 24 Jul 2013, 12:52 pm

ದೊಡ್ಡಬಳ್ಳಾಪುರ: ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಸೋಮವಾರ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ.
ಸಂಘದ ಒಟ್ಟು 35 ಸ್ಥಾನಗಳ ಪೈಕಿ 24 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 11 ಸ್ಥಾನಗಳಲ್ಲಿ 10 ಸ್ಥಾನಗಳಿಗೆ 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 1 ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎರಡೂ ನಾಮಪತ್ರಗಳನ್ನು ಅಭ್ಯರ್ಥಿಗಳು ವಾಪಸ್ ಪಡೆದ ಹಿನ್ನಲೆಯಲ್ಲಿ ಆ ಸ್ಥಾನ ಆಯ್ಕೆಯಾಗದೆ ಹಾಗೇ ಉಳಿದಿದೆ ಎಂದು ಚುನಾವಣಾಧಿಕಾರಿ ಸುರೇಂದ್ರನಾಥ್ ಹೇಳಿದ್ದಾರೆ.
ವಿಜೇತರು: ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ಕೆ.ಎಚ್. ನಟರಾಜ್, ಕೆ.ಎಲ್.ನಾರಾಯಣಪ್ಪ, ಎಂ.ಎಸ್. ರಾಜಶೇಖರ್, ಪ್ರೌಢಶಾಲೆ ಕ್ಷೇತ್ರದಿಂದ ಆರ್. ಪ್ರಹ್ಲಾದ್, ಕಿರಿಯ ಕಾಲೇಜು ಮತ್ತು ಪದವಿ ಕಾಲೇಜು ಕ್ಷೇತ್ರದಿಂದ ಕೆ.ಆರ್. ಮಂಜುನಾಥ್, ಆರೋಗ್ಯ ಇಲಾಖೆ ಕ್ಷೇತ್ರದಿಂದ ಟಿ.ಪಿ.ಅಮರೇಶ್, ಎಸ್.ಚಿನ್ನಮ್ಮ, ಟಿ.ಆರ್.ಕುಮಾರ್, ಟಿ.ಆರ್. ಗಂಗರಾಜು, ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಡಿ.ಬಿ. ಗಂಗಬೈರಪ್ಪ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ: 24 ಸ್ಥಾನಗಳ ಅವಿರೋಧ ಆಯ್ಕೆ ನಡೆದಿದ್ದು, ಭೂಮಾಪನ ಇಲಾಖೆ ಕ್ಷೇತ್ರದಿಂದ ರತ್ನಮ್ಮ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಎಚ್.ಎಸ್. ಸತೀಶ್, ಮಾರುಕಟ್ಟೆ ಮತ್ತು ಎಪಿಎಂಸಿ ಕ್ಷೇತ್ರದಿಂದ ಎಂ.ಎನ್. ನಾಗರಾಜ್, ನ್ಯಾಯಾಂಗ ಇಲಾಖೆಯಿಂದ ಕೆ. ಜಯರಾಮಯ್ಯ, ಶಿಶು ಅಭಿವೃದ್ಧಿ ಇಲಾಖೆಯಿಂದ ಸಿ.ಬಾಲಕೃಷ್ಣ, ಕೃಷಿ ಇಲಾಖೆಯಿಂದ ಟಿ.ಕೆ. ಮುರಳೀಧರ, ಪಶುಸಂಗೋಪನೆ ಇಲಾಖೆಯಿಂದ ಟಿ. ವಿಷ್ಣುಮೂರ್ತಿ, ವಾಣಿಜ್ಯ ತೆರಿಗೆ ಮತ್ತು ಮೀನುಗಾರಿಕೆ ಇಲಾಖೆಯಿಂದ ವಿ.ನರಸಿಂಹಮೂರ್ತಿ, ಕಂದಾಯ ಇಲಾಖೆಯಿಂದ ಸಿ.ಎಸ್. ಅಶ್ವತ್ಥಮ್ಮ, ಸಿ.ಎಸ್. ಶಿವರಾಜು, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಮತ್ತು ನೀರಾವರಿ ಇಲಾಖೆಯಿಂದ ಎಸ್.ಎಂ. ಮಂಜುನಾಥ್, ರಾಮಕೃಷ್ಣಯ್ಯ, ಸಮಾಜ ಕಲ್ಯಾಣ ಇಲಾಖೆ ಮತ್ತು ಓಬಿಸಿ, ಅಲ್ಪಸಂಖ್ಯಾತರ ಇಲಾಖೆಯಿಂದ ಜಿ.ಸಿ. ನಾಗರಾಜ್, ಅರಣ್ಯ ಇಲಾಖೆಯಿಂದ ಸೈಯದ್ ನಿಜಾಮುದ್ದೀನ್, ಕಾನೂನು ಮಾಪನ ಇಲಾಖೆಯಿಂದ ಜಿ.ಆರ್. ಸದಾಶಿವಯ್ಯ, ಅಬಕಾರಿ ಮತ್ತು ಕಾರ್ಮಿಕ ಇಲಾಖೆಯಿಂದ ಶಿವಮೂರ್ತಿ, ವೆಂಕಟೇಶ್, ತೋಟಗಾರಿಕೆ- ರೇಷ್ಮೆ ಇಲಾಖೆಯಿಂದ ಡಿ.ಎನ್. ಸುರೇಶ್, ಡಾ.ಕೆ.ಎಸ್. ವಿನೋದ, ವಾರ್ತಾ ಮತ್ತು ಸಣ್ಣ ಉಳಿತಾಯ ಇಲಾಖೆಯಿಂದ ಸುಬ್ಬರಾವ್, ಖಜಾನೆ ಇಲಾಖೆಯಿಂದ ನಿಜಲಿಂಗಪ್ಪ, ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಸಿ.ಎನ್. ರವಿಕುಮಾರ್, ನಗರಸಭೆಯಿಂದ ವಿ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement