ಅಪಘಾತ: ಮೂರು ಮಂದಿಗೆ ಗಾಯ
ಮಾಗಡಿ: ಸ್ಕೂಟರ್- ಲಗೇಜ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಜುಟ್ಟನಹಳ್ಳಿ ಗೇಟ್ ಬಳಿ ಶನಿವಾರ ಸಂಜೆ ನಡೆದಿದೆ. ಸಂಜೀವಯ್ಯನಪಾಳ್ಯದ ಚಲುವಯ್ಯನ ಮಗ ಕಿರಣ ಮತ್ತು ನರಸಿಂಹಿಯ್ಯನ ಮಗ ಕಿರಣ ಹಾಗು ಚಂದ್ರಶೇಖರ್ ತೀವ್ರವಾಗಿ ಗಾಯಗೊಂಡಿದ್ದು, ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.