ಕಾಂಗ್ರೆಸ್ ಗಾಳಕ್ಕೆ ಬೀಳೋಲ್ಲ: ಪಿಳ್ಳಮುನಿಶಾಮಪ್ಪ ಸ್ಪಷ್ಟನೆ
ದೇವನಹಳ್ಳಿ: ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗಾಳಕ್ಕೆ ತಾವು ಬೀಳುವುದಿಲ್ಲ ಎಂದು ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ಸ್ಪಷ್ಟವಾಗಿ ತಿಳ್ದ್ದಾರೆ. ಯಾವುದೇ ಕಾಂಗ್ರೆಸ್ ಮುಖಂಡರು ತಮ್ಮನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.ತಮಗೆ ರಾಜಕೀಯ ಸ್ಥಾನ ಮಾನ ನೀಡಿರುವ ಎಚ್.ಡಿ.ದೇವೆಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಂಸದರಾದ ಸಿ. ನಾರಾಯಣಸ್ವಾಮಿ, ಜೆಡಿಎಸ್ನಿಂದ ಟಿಕೆಟ್ ನೀಡಿದ್ದರಿಂದಲೇ ಈ ಕ್ಷೇತ್ರದ ಮತದಾರರು ಶಾಸಕನನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸಬೇಕಾಗಿದೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ತಿಳಿಸಿದರು. ಎಂದೂ ಜೆಡಿಎಸ್ಗೆ ದ್ರೋಹ ಬಗೆಯಲಾರೆ. ಇದು ನನ್ನ ಕನಸು ಮನಸಿನಲ್ಲಿಯೂ ಇಲ್ಲ ಎಂದರು.