ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಳು ಅಡ್ಡೆ ಮೇಲೆ ದಾಳಿ; ಮೂರು ವಾಹನಗಳ ವಶ

Rashmi Kasaragodu
Updated On : 2 Jun 2013, 12:46 pm

ದೇವನಹಳ್ಳಿ: ದೇವನಹಳ್ಳಿ ತಾಲೂಕು ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಮುದ್ದನಾಯಕನಹಳ್ಳಿ ಮತ್ತು ತೈಲಗೆರೆ ಸಮೀಪ ಅಕ್ರಮವಾಗಿ ಫಿಲ್ಟರ್ ಮರಳು ತಯಾರಿಕಾ ಕೇದ್ರಗಳ ಮೇಲೆ ಶನಿವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಮರಳು ತುಂಬಿದ್ದ ಎರಡು ಲಾರಿ ಮತ್ತು ಒಂದು ಟ್ರ್ಯಾಕ್ಟರ್ ಹಾಗೂ ನೀರು ಪಂಪ್ ಮಾಡುತ್ತಿದ್ದ ಮತ್ತೊಂದು ಟ್ರ್ಯಾಕ್ಟರ್ಅನ್ನು ವಶಪಡಿಸಿಕೊಂಡಿದ್ದಾರೆ.ತೈಲಗೆರೆ ಬಳಿ ಸಹ ಅಕ್ರಮವಾಗಿ ಮರಳು ತಯಾರಿಸುತ್ತಿದ್ದ ಕೇಂದ್ರದಲ್ಲಿ ಜೆಸಿಬಿಯೊಂದನ್ನು ವಶಪಡಿಸಿಕೊಳಲಾಗಿದೆ ಎಂದು ಗಣಿ ವಿಜ್ಞಾನಿ ಎ.ಎಸ್. ದಯಾನಂದ ಪತ್ರಕರ್ತರಿಗೆ ತಿಳಿಸಿದರು. ದೇವನಹಳ್ಳಿ ಪಟ್ಟಣ ಮತ್ತು ಇತರ ಕಡೆ ಈ ಫಿಲ್ಟರ್ ಮರಳನ್ನು ಉತ್ತಮ ಗುಣಮಟ್ಟದ ಮರಳಿನೊಂದಿಗೆ ಬೆರೆಸಿ ಮಾರಾಟಮಾಡುವ ಬೆರಕೆ ಮಾಡುವ ದಂಧೆಯವರಿಗೆ  10 ರಿಂದ 20 ಸಾವಿರ ರು.ಗಳಿಗೆ ಮಾರಾಟ ಮಾಡುತ್ತಾರೆ ಎಂದರು.  ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಬಹುತೇಕ ಕಡೆ ಮತ್ತು ನಂದಿ ಬೆಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಮರಳು ಫಿಲ್ಟರ್ ದಂಧೆ ನಡೆಯುತ್ತಿದ್ದು ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಹಾಗೂ ಪೊಲೀಸರು ಹಲವಾರು ಬಾರಿ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದರೂ ಮತ್ತೆ ಮರಳು ಫಿಲ್ಟರ್ ದಂಧೆ ನಿಲ್ಲದೆ ನಡೆಯುತ್ತಿದೆ. ಹಲವಾರು ಬಾರಿ ಗ್ರಾಮಸ್ಥರು ತಹಸೀಲ್ದಾರರಿಗೆ ಅಲ್ಲದೆ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement