ಎಪಿಎಂಸಿ: 3.5 ಕೋಟಿ ಶುಲ್ಕ ವಸೂಲಿ
ಹೊಸಕೋಟೆ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಇದುವರೆವಿಗೂ 3.50 ಕೋಟಿ ರೂ.ಗಳ ಮಾರುಕಟ್ಟೆ ಶುಲ್ಕ ವಸೂಲು ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಸಿ.ಮುನಿಯಪ್ಪ ಹೇಳಿದರು. ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರಥಮ ವರ್ಷ ರು. 71 ಲಕ್ಷ ಹಾಗೂ 2012-13ನೇ ಸಾಲಿನಲ್ಲಿ ರು. 2.79 ಕೋಟಿ ಸಂಗ್ರಹಿಸಲಾಗಿದ್ದು, ಜಡಗೇನಹಳ್ಳಿ ಸಮೀಪ ರು. 1.35 ಕೋಟಿ ವೆಚ್ಚದಲ್ಲಿ 11ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು. ಇದೇ ವೇಳೆ, ಸೇವೆಯಿಂದ ನಿವೃತ್ತಿ ಹೊಂದಿದ ಕಾರ್ಯದರ್ಶಿ ಚಿಕ್ಕನರಸಿಂಹರೆಡ್ಡಿ ಅವರನ್ನು ಬೀಳ್ಕೊಡಲಾಯಿತು. ಸಮತಿ ಉಪಾಧ್ಯಕ್ಷ ರಾಮಾಂಜಿನಪ್ಪ, ಸದಸ್ಯರಾದ ಗಣೇಶ್, ಲಕ್ಷ್ಮೀ ನಾರಾಯಣ್, ನಾರಾಯಣಪ್ಪ, ಶ್ರೀರಾಮಪ್ಪ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.