ಜುಲೈನಲ್ಲಿ ಕರಾಮುವಿ ಪರೀಕ್ಷೆ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 2013ರ ಜುಲೈ ಮಾಹೆಯಲ್ಲಿ ವಾರ್ಷಿಕ ಪರೀಕ್ಷೆ ನಡೆಸಲಿದೆ. ದಂಡ ಶುಲ್ಕ ವಿಲ್ಲದೆ ಪರೀಕ್ಷಾ ಶುಲ್ಕ ಪಾವತಿಸಲು ಜೂನ್ 12 ಕಡೆಯ ದಿನ. ರು.200 ದಂಡಸಹಿತ ಜೂನ್ 20 ಕಡೆಯ ದಿನ. ಶುಲ್ಕದ ವಿವರ: ಎಂಬಿಎ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್ ಒಂದು ಪತ್ರಿಕೆಗೆ ರು.500, 2 ಪತ್ರಿಕೆಗೆ ರು.650, 3 ಪತ್ರಿಕೆಗೆ ರು.750, 4 ಹಾಗೂ ಅದಕ್ಕೂ ಹೆಚ್ಚಿನ ಪತ್ರಿಕೆಗಳಿಗೆ ಹಾಗೂ ಪೂರ್ಣ ಪರೀಕ್ಷೆಗೆ ರು.1050. ಶುಲ್ಕವನ್ನು ಪಾವತಿಸುವ ಅರ್ಜಿಯನ್ನು ಅಂಚೆ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಿದ್ದು, ತಲುಪದಿರುವ ವಿದ್ಯಾರ್ಥಿಗಳು ಪ್ರಾದೇಶಿಕ ನಿರ್ದೇಶಕರ ಕಚೇರಿ, ಪ್ರಾದೇಶಿಕ ಕೇಂದ್ರ, ರಾಮನಗರ ಇಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂ.080-27274443 ಸಂಪರ್ಕಿಸಬಹುದು.