ದರೋಡೆ ಮಾಡಿದ್ದ ಐವರ ಸೆರೆ
ದೊಡ್ಡಬಳ್ಳಾಪುರ: ಐಪಿಎಲ್ ಬೆಟ್ಟಿಂಗ್ನಲ್ಲಿ ಸೋತು ಕಂಗಾಲಾಗಿ 10 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ನಗರದ ನಿವಾಸಿಗಳಾದ ಗೋವಿಂದ್, ವಿಶ್ವನಾಥ್, ಸಂಜಯನಗರದ ರಂಜಿತ್, ಅರಳುಮಲ್ಲಿಗೆ ಗ್ರಾಮದ ರಾಜು ಹಾಗೂ ಬೆಂಗಳೂರಿನ ನವೀನ್ ಬಂಧಿತರು.