ಹೊಸಕೋಟೆ ಎಪಿಎಂಸಿ: ರು. 3.5 ಕೋಟಿ ಶುಲ್ಕ ವಸೂಲಿ
ಹೊಸಕೋಟೆ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಇದುವರೆವಿಗೂ 3.50 ಕೋಟಿ ರೂ.ಗಳ ಮಾರುಕಟ್ಟೆ ಶುಲ್ಕ ವಸೂಲು ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಸಿ.ಮುನಿಯಪ್ಪ ಹೇಳಿದರು. ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರಥಮ ವರ್ಷ ರು. 71 ಲಕ್ಷ ಹಾಗೂ 2012-13ನೇ ಸಾಲಿನಲ್ಲಿ ರು. 2.79 ಕೋಟಿ ಸಂಗ್ರಹಿಸಲಾಗಿದ್ದು, ಜಡಗೇನಹಳ್ಳಿ ಸಮೀಪ ರು. 1.35 ಕೋಟಿ ವೆಚ್ಚದಲ್ಲಿ 11ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು. ಇದೇ ವೇಳೆ, ಸೇವೆಯಿಂದ ನಿವೃತ್ತಿ ಹೊಂದಿದ ಕಾರ್ಯದರ್ಶಿ ಚಿಕ್ಕನರಸಿಂಹರೆಡ್ಡಿ ಅವರನ್ನು ಬೀಳ್ಕೊಡಲಾಯಿತು. ಸಮತಿ ಉಪಾಧ್ಯಕ್ಷ ರಾಮಾಂಜಿನಪ್ಪ, ಸದಸ್ಯರಾದ ಗಣೇಶ್, ಲಕ್ಷ್ಮೀ ನಾರಾಯಣ್, ನಾರಾಯಣಪ್ಪ, ಶ್ರೀರಾಮಪ್ಪ, ಗೋವಿಂದಪ್ಪ, ವಿಜಯ ಕುಮಾರ್, ಮಮತ, ಎನ್.ಸಿ.ರಾಜು, ಸಹ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಉಚಿತ ಯೋಗ ಶಿಬಿರ
ಹೊಸಕೋಟೆ: ಪಟ್ಟಣದ ವಿಶ್ವೇಶ್ವರಯ್ಯ ಬಾಡವಣೆಯಲ್ಲಿರುವ ಸ್ವಾಮಿ ವಿವೇಕನಂದ ಯೋಗ ಶಿಕ್ಷಣ ಸಮಿತಿ ವತಿಯಿಂದ ಜೂ.2ರಿಂದ 40ದಿನಗಳ ಅವಧಿಯ 23 ನೇ ಉಚಿತ ಯೋಗ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ನೋಂದಣಿ ಮತ್ತು ಹೆಚ್ಚಿನ ವಿವರಗಳಿಗೆ ಮೊ.9448310491, 9341562795 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
6ರಂದು ಸಾಮಾನ್ಯ ಸಭೆ
ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಜೂ.6ರ ಬೆಳಗ್ಗೆ 11ಕ್ಕೆ ರಾಮನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 13ನೇ ಸಾಮಾನ್ಯ ಸಭೆ ಕರೆಯಲಾಗಿದೆ.