ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆ ಇನ್ನಷ್ಟು ಪ್ರಗತಿ: ಶರಣಪ್ಪ ಕಂಬಳಿ

Rashmi Kasaragodu
Updated On : 4 Jun 2013, 12:11 pm

ಕ.ಪ್ರ.ವಾರ್ತೆ  ಸೂಲಿಬೆಲೆ  ಜೂ. 3
ಸರ್ಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣದೊಂದಿಗೆ ಪ್ರಜ್ಞಾವಂತ ವ್ಯಕ್ತಿಗಳನ್ನಾಗಿ ವಿದ್ಯಾರ್ಥಿಗಳನ್ನು ತಿದ್ದಲು ಹೆಚ್ಚು ಸಮರ್ಥವಾಗಿದ್ದು, ಈ ಶಾಲೆಗಳಿಗೆ ದಾನಿಗಳ ಸಹಕಾರ ಸಿಕ್ಕರೆ ಇನ್ನಷ್ಟು ಪ್ರಗತಿಯನ್ನು ಕಾಣಲು ಸಾಧ್ಯವಾಗಲಿದೆ ಎಂದು ಅತ್ತಿಬೆಲೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ಕಂಬಳಿ ಹೇಳಿದ್ದಾರೆ.
ಸೂಲಿಬೆಲೆ ಸಮೀಪದ ಅತ್ತಿಬೆಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಲಿತು ಹೆಚ್ಚು ಅಂಕಪಡೆದ  ವಿದ್ಯಾರ್ಥಿಗಳಿಗೆ ದಾನಿ ಮುನಿವೀರಪ್ಪ ನೀಡಿದ ನಗದು ಬಹುಮಾನಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದಾನಿ ಮುನಿವೀರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಇವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾಗಬೇಕು. ಉತ್ತಮ ಶಿಕ್ಷಣ ಪಡೆದ ಮಕ್ಕಳು ಸದೃಢ ದೇಶವನ್ನು ಕಟ್ಟಲು ಸಾಧ್ಯ. ಶಿಕ್ಷಣವೇ ದೇಶದ ಆಸ್ತಿಯಾಗಿದ್ದು, ಪ್ರತಿಯೊಬ್ಬರು ತಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿಸಿ ಸಮಾಜದ ಏಳಿಗೆಗೆ ಕಾರಣರಾಗಬೇಕು ಎಂದರು.
5 ರಿಂದ 7 ನೇ ತರಗತಿಯಲ್ಲಿ ಕಲಿತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ, ಸದಸ್ಯ ನಾರಾಯಣಗೌಡ, ಅನುರಾಗ್, ಜಯಲಕ್ಷ್ಮಿ, ಜಯಂತಿ, ಮಂಜುಳಾ, ಸುರ್ವಣ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು. ಇದೇ ವೇಳೆ ಸರ್ಕಾರದಿಂದ ಪೂರೈಕೆಯಾಗಿದ್ದ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳನ್ನು  ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement