ಸೂಲಿಬೆಲೆ ಗ್ರಾಪಂ ಕಾರ್ಯದರ್ಶಿ ನಿವೃತ್ತಿ: ಬೀಳ್ಕೊಡುಗೆ
ಸೂಲಿಬೆಲೆ: ಇಲ್ಲಿನ ಗ್ರಾಪಂದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಸುಬ್ಬಾಶೆಟ್ಟಿ ಅವರು ನಿವೃತ್ತಿ ಹೊಂದಿದ್ದು, ಗ್ರಾಪಂ ಸಿಬ್ಬಂದಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಗ್ರಾಪಂ ಕಚೇರಿ ಆವರಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸುಬ್ಬಾಶೆಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್. ನಾಗರಾಜಪ್ಪ, ಸರಳ ಮತ್ತು ಶಾಂತ ಸ್ವಭಾವ ಹೊಂದಿದ್ದ ಸುಬ್ಬಾಶೆಟ್ಟರು ಗ್ರಾಪಂ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಹೊಂದಿ ಕೆಲಸ ಮಾಡುತ್ತಿದ್ದರು. ಒತ್ತಡದ ಮಧ್ಯೆಯೂ ಅವರ ಶಾಂತಚಿತ್ತರಾಗಿ ಕೆಲಸ ಮಾಡುತ್ತಿದ್ದು ಸಂದರ್ಭಗಳು ಇತರರಿಗೆ ಮಾದರಿಯಾಗಿದೆ. ಬೇರೊಬ್ಬರನ್ನು ನೋಯಿಸುವಂತ ಕಾರ್ಯಕ್ಕೆ ಎಂದಿಗೂ ಇವರ ಮುಂದಾಗಿಲ್ಲ. ಸರ್ಕಾರಿ ನೌಕರಿ ಎಂದ ಮೇಲೆ ಪ್ರತಿಯೊಬ್ಬರಿಗೂ ನಿವೃತ್ತಿ ಸಹಜ. ಇವರ ನಿವೃತ್ತಿ ಜೇವನ ಸುಖಕರವಾಗಿರಲಿ ಎಂದು ಹೇಳಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೂ.ರಂ. ರಾಮಯ್ಯ, ಗ್ರಾಪಂ ಅಧ್ಯಕ್ಷ ಕೆ. ನಾರಾಯಣಪ್ಪ, ಉಪಾಧ್ಯಕ್ಷೆ ಮುನಿತಾಯಮ್ಮ ಹಾಗೂ ಗ್ರಾಪಂ ಸಿಬ್ಬಂದಿ ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಗೌರವಿಸಿದರು. ಅಸ್ತ್ರ ಸಂಸ್ಥೆಯ ಅಧಿಕಾರಿ ಚಂದನ್, ಕರವಸೂಲಿಗಾರ ನಾರಾಯಣಸ್ವಾಮಿ, ನಾಗವೇಣಿ, ಕವಿತಾ ಮತ್ತು ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗದವರು ಹಾಜರಿದ್ದರು.