ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಕ್ರಮ ಮರಳು ಸಾಗಣೆ: 8 ಲಾರಿ ವಶ

Rashmi Kasaragodu
Updated On : 5 Jun 2013, 12:40 pm

ಚನ್ನಪಟ್ಟಣ:  ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ 8 ಲಾರಿಗಳನ್ನು ತಹಸೀಲ್ದಾರ್ ನೇತೃತ್ವದ ತಂಡ ವಶಪಡಿಸಿ ಕೊಂಡಿದೆ. ಖಚಿತ ಮಾಹಿತಿಯ ಮೇರೆಗೆ ಕೊಲೂರು ಗೇಟ್ ಸಮೀಪ ದಾಳಿ ಮಾಡಿದ ತಹಸೀಲ್ದಾರ್ ಡಾ.ದಯಾನಂದ್ ನೇತ್ವತ್ವದ ತಂಡ ಮರಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಿಸಿಯೂಟದ ಹಣ, ಸಿಲಿಂಡರ್ ಕಳವು
ಚನ್ನಪಟ್ಟಣ: ಶಾಲೆಯ ಬಿಸಿಯೂಟಕ್ಕೆಂದು ದಾಸ್ತಾನು ಮಾಡಲಾಗಿದ್ದ ಗ್ಯಾಸ್ ಸಿಲಿಂಡರ್ ಮತ್ತು ಶಾಲೆಯ ಕಚೇರಿಯಲ್ಲಿ ಇರಿಸಲಾಗಿದ್ದ 6500 ರು. ಹಣ ಕಳವು ಮಾಡಿರುವ ಘಟನೆ ತಾಲೂಕಿನ ಮತ್ತಿಕೆರೆಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸೋಮುವಾರ ರಾತ್ರಿ ಶಾಲೆಯಲ್ಲಿ ಸಿಲಿಂಡರ್ ಇರಿಸಲಾಗಿದ್ದ ಅಡುಗೆ ಮನೆಯ ಬಾಗಿಲನ್ನು ಹಾರೆಯಿಂದ ಮೀಟಿ ಸಿಲಿಂಡರ್‌ಗಳನ್ನು ಕಳವು ಮಾಡಲಾಗಿದ್ದು, ಬಳಿಕ ಕಚೇರಿಯ ಬಾಗಿಲು ಒಡೆದು ಅಲ್ಲಿ ಇಡಲಾಗಿದ್ದ ನಗದನ್ನು ದೋಚಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೈಕ್ ಸವಾರ ಸಾವು
ರಾಮನಗರ: ಶಾಲಾ ವಾಹನ ಬೈಕ್‌ಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ನೇತಾಜಿ ಪಾಪ್ಯುಲರ್ ಶಾಲೆಯ ಬಳಿ ನಡೆದಿದೆ.  ತಾಲೂಕಿನ ಕೈಲಾಂಚ ಗ್ರಾಮದ ನಿವಾಸಿ ನಿವಣತ್ತ ಕಂದಾಯ ನಿರೀಕ್ಷಕ ತಿಮ್ಮೇಗೌಡ(63) ಮೃತ ವ್ಯಕ್ತಿ. ಮಂಗಳವಾರ ಸಂಜೆ 4.30ರ ಸಮಯದಲ್ಲಿ ಪಾಪ್ಯುಲರ್ ಶಾಲೆಯ ಬಳಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಶಾಂತಿನಿಕೇತನ ಶಾಲೆಯ ವಾಹನ ಹಿಮ್ಮುಖವಾಗಿ ಚಲಿಸಿ, ತಿಮ್ಮಯ್ಯ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ
ರಾಮನಗರ: ನಗರದ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯ ಆದಿಶಕ್ತಿಪುರದ ವಾಸಿ ಲಕ್ಷ್ಮೀಬಾಯಿ ಎಂಬುವರ ಮಗ ಚೇತನ್ (11) ಮೇ 25ರಂದು ಕಾಣೆಯಾಗಿದ್ದಾನೆ. ಮನೆಯಿಂದ ಹೊರ ಹೋಗಿದ್ದ ಈ ಹುಡುಗ ಮತ್ತೆ ಮನೆಗೆ ಬಂದಿರುವುದಿಲ್ಲ. ಗುಂಡು ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು ಹೊಂದಿರುವ ಈತ ಕಾಣೆಯಾದಾಗ ಹಸಿರು ಮತ್ತು ಹಳದಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡಲು ಬಲ್ಲ ಈ ಹುಡುಗನ ಬಗ್ಗೆ ಮಾಹಿತಿ ದೊರೆತಲ್ಲಿ ರಾಮನಗರದ ಐಜೂರು ಠಾಣೆಯ ಎಸ್‌ಐಗೆ ಸಂಪರ್ಕಿಸಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement