ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಡಿವ ನೀರಿನ ಸಮಸ್ಯೆ ನಿವಾರಣೆ 7 ಕೊಳವೆ ಬಾವಿ

Rashmi Kasaragodu
Updated On : 5 Jun 2013, 12:37 pm

ಕನ್ನಡಪ್ರಭ ವಾರ್ತೆ   ಮಾಗಡಿ   ಜೂ. 4
ಪಟ್ಟದಲ್ಲಿ ತಲೆದೊರಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಬರಪರಿಹಾರ ನಿಧಿಯಡಿ ಏಳು ಕೊಳವೆ ಬಾವಿ ಕೊರೆಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಆರ್. ಮಂಜುನಾಥ್ ತಿಳಿಸಿದರು.
ಅವರು ಮಾಗಡಿ ಪಟ್ಟಣದ 2ನೇ ವಾರ್ಡ್‌ನ ಕುರುಬರ ಬೀದಿಯಲ್ಲಿ ಕೊಳವೆ ಬಾವಿ ಕೊರೆಸಲು ಯಂತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಪಟ್ಟಣದ 2, 5, 10, 13, 20, 21, 22ನೇ ವಾರ್ಡ್‌ಗಳಲ್ಲಿ ಹೆಚ್ಚಿನ ನೀರಿನ ನೀರಿನ ಸಮಸ್ಯೆಯಿದ್ದು, ಅಗತ್ಯವಿರುವೆಡೆ ಆದಷ್ಟು ಬೇಗ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಪುರನಾಗರಿಕರು ಸಹ ನೀರು ಪೋಲಾಗದಂತೆ ಮಿತವಾಗಿ ಬಳಸಬೇಕು. ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು, ಪುರಸಭೆಯ ಗಾಡಿಗಳಿಗೆ ಕಸ ಹಾಕುವುದನ್ನು ರೂಢಿಸಿಕೊಳ್ಳಬೇಕು. ಶೌಚಾಲಯದ ಮಲಮೂತ್ರಗಳನ್ನು ಚರಂಡಿಗೆ ಹರಿದು ಬಿಡದಂತೆ ಎಚ್ಚರವಹಿಸಬೇಕು,  ರೋಗ ರುಜುಗಳು ಹರಡದಂತೆ ಚರಂಡಿಗಳಿಗೆ ಪುರಸಭೆ ವತಿಯಿಂದ ಪಾಂಗಿಂಗ್, ಡಿಡಿಟಿ ಸಿಂಪಡಿಸಲಾಗುತ್ತಿದೆ. ನಾಗರಿಕರು  ಪುರಸಭೆಯೊಂದಿಗೆ ಸಹಕರಿಸಿ ಪುರೋಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಬಸವರಾಜು ಮಾತನಾಡಿ ವಾರ್ಡ್ ಅಭಿವೃದ್ಧಿಗೆ ಪುರಸಭೆ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ನೀರನ್ನು ವಿತವಾಗಿ ಬಳಸೋಣ, ಸ್ವಚ್ಛತೆಯನ್ನು ಕಾಪಾಡೋಣ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪುರಸಭೆಯೊಂದಿಗೆ ನಾವೆಲ್ಲರು ಸಹಕರಿಸೋಣ ಎಂದರಲ್ಲದೆ ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಇಲ್ಲಿನ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಎಂಜಿನಿಯರ್‌ಗಳಾದ  ಪ್ರಶಾಂತ್ ಶೆಟ್ಟಿ, ಮುರಳಿಧರ್, ಗಿರೀಶ್, ಪುರಸಭೆ  ನರಸಿಂಹಮೂರ್ತಿ, ಗಂಗಸಿದ್ದಯ್ಯ, ರಾಮಯ್ಯ, ವೆಂಕಟೇಶ್, ಕುಸುಮಾ, ಸುಮತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement