ಶಾಲಾ ದಾಖಲಾತಿ ಆಂದೋಲನ
ವಿಜಯಪುರ: ಇಲ್ಲಿನ 6ನೇ ವಾರ್ಡಿನಲ್ಲಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ವತಿಯಿಂದ ಮಕ್ಕಳನ್ನು ಶಾಲೆಗೆ ಸೇರಿಸುವ ಆಂದೋಲನ ಜಾಥಾ ಕಾರ್ಯಕ್ರಮ ನಡೆಯಿತು.
ಜಾಥಾದಲ್ಲಿ ಭಾಗವಹಿಸಿದ ಮುಖ್ಯೋಪಾಧ್ಯಯ ಮನೋಹರ್ ಮಾತನಾಡಿ, ಸರ್ಕಾರದಿಂದ ಸಾಕಷ್ಟು ಅನುದಾನಗಳು ಪ್ರಾಥಮಿಕ ಶಾಲೆಗಳಿಗೆ ಸಿಗುತ್ತಿದ್ದು, ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿಸಿದರು. ಕಳೆದ 2 ವರ್ಷಗಳಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಿದ್ದು ಖಾಸಗಿ ಶಾಲೆಗಳಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಅರಿತು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಶಿಕ್ಷಕರೊಂದಿಗೆ ಹೊರಟು ಮಕ್ಕಳನ್ನು ಶಾಲೆಗೆ ಸೇರಿಸುವ ಕರಪತ್ರ ಹಂಚಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ದೀಪಾ ರಮೇಶ್, ಸದಸ್ಯರಾದ ಚಂದೇನಹಳ್ಳಿ ಚಂದ್ರಶೇಖರ್ ಬಾಬು, ಮಂಜುನಾಥ್, ಸಹಶಿಕ್ಷಕರಾದ ಬೇಬಿನಾಯಕ್, ಗಿರಿಜಾಂಬ ರುದ್ರೇಶ್ ಮೂರ್ತಿ, ಚಿದಾನಂದ ಬಿರಾದಾರ್, ಲತಾ, ಜಲಜಾಕ್ಷಿ, ಮಧುಕುಮಾರಿ ಮತ್ತಿತರರು ಜಾಥಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.