ಅತ್ಯಾಚಾರ: ಅಸ್ವಸ್ಥ ಮಹಿಳೆ ಸಾವು
ಶ್ರೀರಂಗಪಟ್ಟಣ: ಕಳೆದ 15 ದಿನಗಳ ಹಿಂದೆ ಪಾಂಡವಪುರ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅಂಕನಹಳ್ಳಿ ಗ್ರಾಮದ ಬೆಳ್ಳುಳ್ಳಿ ಶಂಕರಪ್ಪ ಪುತ್ರ ನಂದೀಶ್ ಅದೇ ಗ್ರಾಮದ ಜಗದೀಶ್‌ನ ಪತ್ನಿ ಪ್ರಮೀಳಾ (30) ತಮ್ಮ ಜಮೀನ ಬಳಿ ದನ ಮೇಯಿಸಲು ಹೋಗಿದ್ದಾಗ ಅವರ ಮೇಲೆ ಅತ್ಯಾಚಾರ ನಡೆಸಿ ನಂತರ ಹತ್ಯೆ ಮಾಡಲು ಯತ್ನಿಸಿದ್ದನು. ಈ ಸಂಬಂಧ ತಾಲೂಕಿನ ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಪ್ರಮೀಳಾ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕ್ಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆರೋಪಿ ನಂದೀಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.