ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇನಾ ಬ್ಯಾಂಕಿನಲ್ಲಿ ರೈತರಿಗೆ ಸಾಲ ವಿತರಣೆ

Rashmi Kasaragodu
Updated On : 7 Jun 2013, 12:52 pm

ದೇವನಹಳ್ಳಿ: ಇಲ್ಲಿನ ಪ್ರಶಾಂತನಗರದಲ್ಲಿರುವ ದೇನಾ ಬ್ಯಾಂಕಿನಲ್ಲಿ ರೈತರಿಗಾಗಿ ಸಾಲ ಮೇಳ ಅಂಗವಾಗಿ ಸಾಲದ ಚೆಕ್ಗಳ ವಿತರಣೆ ಹಾಗೂ ಬ್ಯಾಂಕಿನ ಹಿರಿಯ ಗ್ರಾಹಕರಿಗೆ ಸನ್ಮಾನ ಸಮಾರಂಭ  ಗುರುವಾರ ಆಯೋಜಿಸಲಾಗಿತ್ತು.
ದೇನಾ ಬ್ಯಾಂಕಿನ ವಲಯ ಕಚೇರಿಯ ಸಹಾಯಕ ವ್ವಸ್ಥಾಪಕರಾದ ವೆಂಕಟೇಶ್ವರಲು ಅವರು ಫಲಾನುಭವಿಗಳಿಗೆ ಸಾಲದ ಚೆಕ್ಕನ್ನು ವಿತರಣೆ ಮಾಡಿ ದೇಶದಲ್ಲಿ 1500 ಕ್ಕೂ ಹೆಚ್ಚು ಶಾಖೆಗಳು ಹಾಗೂ ಬೆಂಗಳೂರು ವಲಯದಲ್ಲಿ 78 ಶಾಖೆಗಳು ಗ್ರಾಹಕರಿಗಾಗಿ ಸೇವೆ ಸಲ್ಲಿಸುತ್ತಿವೆ.
ದೇಶದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ ಎಂದರು.  ಗ್ರಾಹಕರ ಸೇವೆಯೇ ಮುಖ್ಯ ಗುರಿಯಾಗಿದ್ದು ಹಣ ಉಳ್ಳ ಗ್ರಾಹಕರು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಹೆಚ್ಚಿನ ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲು ಸಾಧ್ಯ ಎಂದರಲ್ಲದೆ ಬಾಲಕರಿಗಾಗಿ ಬ್ಯಾಂಕಿನಲ್ಲಿ ಖಾತೆ ಆರಂಭಿಸಲು ಅವಕಾಶ ಕಲ್ಪಿಸಿದ್ದು ಅಲ್ಲದೆ ರೈತರಿಗಾಗಿ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡಿದ ಪ್ರಥಮ ಬ್ಯಾಂಕಾಗಿದೆ ಎಂದರು.
 ಬ್ಯಾಂಕಿನ ವ್ಯವಸ್ಥಾಪಕರಾದ ವಿ.ಡಿ ಕಾಮೇಶ್ವರ್ ಅವರು ಬ್ಯಾಂಕಿನ ಹಿರಿಯ ಗ್ರಾಹಕರಾದ ಬೈಚಾಪುರ
ನಾಗರತ್ನಮ್ಮ ಶಾಂತಪ್ಪ, ಗೊಲ್ಲಹಳ್ಲಿ ವೀರಣ್ಣ, ರಾಘವೇಂದ್ರ ಇವರುಗಳನ್ನು ಸನ್ಮಾನಿಸಿದರಲ್ಲದೆ ಇಲ್ಲಿನ ಶಾಖೆ 2010 ರಲ್ಲಿ ಆರಂಭಗೊಂಡಿದ್ದು 50 ಕೋಟಿ ವ್ಯವಹಾರ ಮಾಡಿದೆ. ಅದರಲ್ಲಿ 6.50 ಕೋಟಿ ರು. ಠೇವಣಿ ಮತ್ತು 43.50 ಕೋಟಿ ರು.ಗಳ ಸಾಲ ವಿತರಣೆ ಮಾಡಲಾಗಿದ್ದು ಇದುವರೆಗೆ 2.3 ಕೋಟಿ ಲಾಭ ಗಳಿಸಿದೆ ಎಂದರು.
ಇದೇ ವೇಳೆ ಬ್ಯಾಂಕಿನ ಅಧಿಕಾರಿಗಳಾದ ಸ್ವಾಮಿದಾಸ್ ಅವರು ಮಾತನಾಡಿ ಬ್ಯಾಂಕಿಗೆ ಬರುವ ಎಲ್ಲ ವರ್ಗದ ಗ್ರಾಹಕರಿಗೆ ಬ್ಯಾಂಕಿನ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಯಲ್ಲಿ ಅವಿದ್ಯಾವಂತರಿಗೆ ಸೂಕ್ತ ಮಾರ್ಗದರ್ಶನ ಸಹ ನೀಡಲಾಗುತ್ತಿದೆ ಎಂದರು. ಗ್ರಾಹಕರು ಬ್ಯಾಂಕಿನಿಂದ ಏನನ್ನು ಬಯುಸುತ್ತೀರೋ ಅದಕ್ಕೆ ತಕ್ಕಂತೆ ಸಿಬ್ಬಂದಿ ಸ್ಪಂದಿಸುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement