ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಸ್ಪೃಶ್ಯತೆ ಆಚರಣೆ ಖಂಡನೀಯ

Rashmi Kasaragodu
Updated On : 8 Jun 2013, 12:26 pm

ಆನೇಕಲ್:  21ನೆಯ ಶತಮಾನದಲ್ಲೂ ಅಸ್ಪೃಶ್ಯತೆ ಆಚರಣೆ ಖಂಡನೀಯ ಎಂದು ಪ್ರಜಾವಿಮೋಚನಾ ಚಳವಳಿ ಮಾನವತಾವಾದ ರಾಜ್ಯ ಪ್ರ. ಕಾರ್ಯದರ್ಶಿ ಆದೂರು ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಗ್ರಾಮಾಂತರ ಜಿಲ್ಲೆಯ ಕನಕಪುರದ ಹುಯ್ಯಂಬಳ್ಳಿ-ಏಳಗಳ್ಳಿಯ ಮುದ್ದಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ದಲಿತ ಯುವಕನೊಬ್ಬ ಬೆಂಕಿಯ ಕೊಂಡಕ್ಕೆ ಸೌದೆ ನೀಡಿದನೆಂಬ ಕಾರಣಕ್ಕಾಗಿ ಸವರ್ಣೀಯ ಮುಖಂಡರು ಥಳಿಸಿ ನ್ಯಾಯ ಕೇಳಿದ ಊರಿನ ಎಲ್ಲ ದಲಿತರಿಗೂ ಸಮೂಹಿಕ ಬಹಿಷ್ಕಾರ ಹಾಕಿರುವುದು ರಾಕ್ಷಸೀಯ ಕೃತ್ಯ  ಹಾಗೂ ಮಾನವ ಕುಲಕ್ಕೇ ನಾಚಿಕೆ ಗೇಡಿನ ಸಂಗತಿ ಎಂದಿದ್ದಾರೆ. ಅಭಿವೃದ್ಧಿ ಶೀಲ ರಾಷ್ಟ್ರದ ಪಟ್ಟಿಯಲ್ಲಿರುವ ಭಾರತ ಯಾವ ರೀತಿಯಲ್ಲಿ  ವಿಶ್ವದಲ್ಲಿ ತಲೆ ಎತ್ತುತ್ತದೆ ಎಂಬುದನ್ನು ಪ್ರಶ್ನಿಸಿದ ಅವರು ಈ ಕೂಡಲೇ ಜಿಲ್ಲಾ ಆಡಳಿತ ಮಧ್ಯ ಪ್ರವೇಶಿಸಿ ದಲಿತ ಬಂಧುಗಳಿಗೆ ಕಾನೂನು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement