ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಲ್ಲು ಚಪ್ಪಡಿ ಬಿದ್ದು ವ್ಯಕ್ತಿ ಸಾವು

Rashmi Kasaragodu
Updated On : 8 Jun 2013, 12:26 pm

ವಿಜಯಪುರ: ಪಟ್ಟಣದ ಅಮನಿಕೆರೆಯ ಕೋಡಿ ಹರಿಯುವ ಜಾಗದ ದಿನ್ನೆಯಲ್ಲಿನ ಮನೆಯ ಬಳಿ ವ್ಯಕ್ತಿಯೊಬ್ಬನ ಮೇಲೆ ಚಪ್ಪಡಿ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಎಲ್ಲಮ್ಮ ದೇವಾಲಯದ ಬಳಿಯಿರುವ ನಿವಾಸಿ ಮುನಿಎಲ್ಲಪ್ಪ ಅವರ ಮಗ ಮುರುಳಿ (28)ಮೃತ ಪಟ್ಟ ದುರ್ದೈವಿ. ಬೆಳಿಗ್ಗೆ 9.30ರ ಸಮಯದಲ್ಲಿ ಅನ್ವರ್ ಪಾಷ ಅಲಿಯಾಸ್ ಜಲಾನಿ ಎಂಬುವವರು ತನ್ನ ಮನೆಯ ಹತ್ತಿರವಿದ್ದ ಚಪ್ಪಡಿ ಕಲ್ಲು ಇಳಿಸಿಕೊಡಲು ಕೂಲಿ ಕೆಲಸಕ್ಕೆಂದು ಮುರಳಿಯನ್ನು ಕರೆದುಕೊಂಡು ಹೋಗಿದ್ದ. ಕೆಲಸ ಮಾಡುತ್ತಿದ್ದ ಮುರುಳಿ 10.30ರ ಸಮಯದಲ್ಲಿ ಎರಡು ಚಪ್ಪಡಿ ಇಳಿಸಿದ್ದು ಮೂರನೆ ಕಲ್ಲನ್ನು ಇಳಿಸುವ ಸಂದರ್ಭದಲ್ಲಿ ಕಲ್ಲು ಸೀಳಿಕೊಂಡು ಮುರುಳಿಯ ತಲೆಯ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ರಕ್ತ ಸ್ರಾವವಾಗಿದೆ. ತಕ್ಷಣ ಜುಲಾನಿ ತನ್ನ ಕಾರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕ ಮಂಜುನಾಥ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement