ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೃಷಿ ಭೂಮಿಯಲ್ಲಿ ತಲೆ ಎತ್ತಿದ ಕೈಗಾರಿಕೆಗಳು

Rashmi Kasaragodu
Updated On : 8 Jun 2013, 12:26 pm

ನೆಲಮಂಗಲ: ಕೃಷಿಯೋಗ್ಯ ಭೂಮಿಯಲ್ಲಿ ಇಂದು ಕೈಗಾರಿಕೆಗಳು ತಲೆ ಎತ್ತುತ್ತಿವೆ. ಇದರಿಂದ ಮರ ಗಿಡಗಳು ಕಣ್ಮರೆಯಾಗಿ ಕಾಂಕ್ರಿಟ್ ಕಾಡು ಬೆಳೆದು ಹೊಗೆ, ಧೂಳು ವಾಯು ಮಂಡಲಕ್ಕೆ ಸೇರಿ ಇಡೀ ಪರಿಸರ ಕಲುಷಿತವಾಗುತ್ತಿದೆ ಎಂದು ಪರಿಸರ ಪ್ರಿಯರಿಂದ ಕೂಗು ಕೇಳಿ ಬರುತ್ತಿದೆ ಎಂದು ಟಿ.ಆರ್.ಎಂ.ಎನ್ ಕಂಪನಿಯ ಸಂಚಾಲಕ ರಾಜಕಿರಣ್ ತಿಳಿಸಿದರು.
ಅವರು ಶುಕ್ರವಾರ ತಾಲೂಕಿನ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಇರುವ ಟಿ.ಆರ್.ಎಂ.ಎನ್ ಕಂಪನಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೈಗಾರಿಕೆಯ ಬಯಲಿನಲ್ಲಿ ಸಸಿ ನೆಡುವ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಕೈಗಾರಿಕೆಗಳು ಪರಿಸರ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೆ ಪಾಲಿಸುವುದರಿಂದ ಯಾವುದೇ ಕಾರ್ಖಾನೆಯು ಆರೋಪಕ್ಕೆ ತುತ್ತಾಗುವುದಿಲ್ಲ.
ಕೈಗಾರಿಕೆಯನ್ನು ನಿರ್ವಹಿಸುವ ಮುಖ್ಯಸ್ಥರು ಯಾವುದೇ ಸಂದರ್ಭದಲ್ಲಿಯೂ ನಿರ್ಲಕ್ಷ ತೋರಬಾರದು ಎಂದರು.
 ಕಂಪನಿಯನ್ನು ಮುನ್ನಡೆಸುವವರು ಸ್ವಲ್ಪ ಕಾಳಜಿ ತಪ್ಪಿದರೆ ಪರಿಸರದ ಮೇಲೆ ಬಾರಿ ಪ್ರಮಾಣದ ಮಾಲಿನ್ಯ ಉಂಟಾಗುತ್ತದೆ ಮತ್ತು ಜನರಿಂದ ಕಾರ್ಖಾನೆ ಬಗ್ಗೆ ದೂರು ಮತ್ತು ಆರೋಪಗಳು ಸಹಜವಾಗಿಯೇ ಬರುತ್ತವೆ. ಇದರಿಂದ ನಮ್ಮ ಕೈಗಾರಿಕೆ ಹೊರತಾಗಿದೆ.
ನಮ್ಮಲ್ಲಿ ಪರಿಸರ ಇಲಾಖೆಯ ನಿಯಮದಂತೆ ನಡೆದುಕೊಂಡು ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕಂಪನಿಯ ಮುಖ್ಯಸ್ಥರಾದ ಚೇತನ್‌ಕುಮಾರ್, ಸುಜಿಮುರಾ, ಜೇಕಬ್, ನಿಶಿಯೋ, ಸುಗ ವಿಶ್ವ ಪರಿಸರ  ದಿನಾಚರಣೆಯಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement