ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗುಟ್ಕಾ ಅಂಗಡಿ ಮಳಿಗೆಗಳ ಮೇಲೆ ದಾಳಿ

Rashmi Kasaragodu
Updated On : 8 Jun 2013, 12:27 pm

ಕ.ಪ್ರ.ವಾರ್ತೆ  ಮಾಗಡಿ  ಜೂ.7
ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿ ಮಳಿಗೆಗಳ ಮೇಲೆ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಗುಟ್ಕಾ ಪಾನ್ ಮಸಾಲ ಪಾಕೆಟ್‌ಗಳನ್ನು ವಶಪಡಿಸಿಕೊಂಡರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಬಂಧನೆಗಳು ರಚಿತಗೊಂಡಿದ್ದು, ತಂಬಾಕು, ನಿಕೋಟಿನ್  ಅಂಶಗಳುಳ್ಳ ಪದಾರ್ಥಗಳನ್ನು ರಾಜ್ಯಾದ್ಯಂತ ನಿಷೇಧಿಸಲು ಸರ್ಕಾರ ಸಮರ ಸಾರಿದ್ದು, ಈ ನಿಟ್ಟಿನಲ್ಲಿ ಮಾಗಡಿ ಪಟ್ಟಣದಾದ್ಯಂತ ಅಂಗಡಿ ಮಳಿಗೆಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಆರ್. ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಧಿಡೀರ್  ದಾಳಿ ನಡೆಸಿದರು.  ಗುಟ್ಕಾ ಅಂಗಡಿ ಮಳಿಗೆಗಳ ಮೇಲೆ ದಾಳಿ ವೇಳೆ ಪುರಸಭೆ ಪರಿಸರ ಎಂಜಿನಿಯರ್ ಗಿರೀಶ್, ಆರೋಗ್ಯಾಧಿಕಾರಿ ಕುಸುಮಾ, ರೆವಿನ್ಯೂ ಅಧಿಕಾರಿ ಗುರುನಾಥ್, ನಂದೀಶ್, ಸುಮತಿ, ನರಸಿಂಹಮೂರ್ತಿ, ರಾಜಣ್ಣ, ರಾಮಕೃಷ್ಣ, ನಂಜಂಡಪ್ಪ, ಸಮಾ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement