ಮಹದೇಶ್ವರ ಪೂಜಾ ಮಹೋತ್ಸವ
ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಜೂ.10ರ ಸೋಮವಾರ ಶ್ರೀ ಮಹದೇಶ್ವರ ಪೂಜಾ ಮಹೋತ್ಸವ(ಪರಾವು) ಮತ್ತು ಬಸವೇಶ್ವರ ಸ್ವಾಮಿಯವರಿಗೆ ಅಕ್ಕಿ ಪೂಜೆ ಕಾರ್ಯಕ್ರಮವನ್ನು ನಡೆಸಲಾಗುವುದು.
ಸಿದ್ದಗಂಗೆಯ ಶ್ರೀ ಶಿವಕುಮಾರಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ನೇತೃತ್ವವನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಹೊನ್ನಮ್ಮಗವಿ ಮಠದ ರುದ್ರಮುನಿಶಿವಾಚಾರ್ಯ ಸ್ವಾಮೀಜಿ, ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಮಠದ ಮಹಂತ ಸ್ವಾಮೀಜಿ, ಚಿಕ್ಕ ಮಸ್ಕಲ್ ಮಠದ ಬಸವಲಿಂಗ ಸ್ವಾಮೀಜಿ, ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ, ಮಾಕನಹಳ್ಳಿ ಮಠದ ಗಂಗಾಧರ ಸ್ವಾಮೀಜಿ, ನೆಲಮಂಗಲ ಮಠದ ಸಿದ್ದಲಿಂಗಸ್ವಾಮೀಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಸಿದ್ದಗಂಗೆಯ ಶಿವಕುಮಾರಸ್ವಾಮೀಜಿಯವರನ್ನು ವೀರಗಾಸೆ, ಮಂಗಳ ವಾದ್ಯಗಳೊಂದಿಗೆ ಮತ್ತು 106 ಕುಂಭಗಳೊಂದಿಗೆ ಭವ್ಯ ಸ್ವಾಗತ ಮಾಡಲಾಗುತ್ತಿದೆ.