ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರ

Rashmi Kasaragodu
Updated On : 8 Jun 2013, 12:30 pm

ಮಾಗಡಿ: ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ (ಅಂಗವಿಕಲ) ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಬ್ಲಾಕ್ ಹಂತದಲ್ಲಿ  ಜೂ.10 ರಂದು ಸೋಮವಾರ ಬೆಳಿಗ್ಗೆ 10 ಕ್ಕೆ ತಿರುಮಲೆಯಲ್ಲಿನ ಬಿ.ಆರ್.ಸಿ.ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಬಿ.ಆರ್.ಸಿ. ಕೇಂದ್ರದ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೃಷ್ಟಿದೋಷ, ಶ್ರವಣದೋಷ, ಮಾತಿನ ವಿಕಲತೆ, ಚಲನವಲನ ನೂನ್ಯತೆ, ಬುದ್ಧಿಮಾಂದ್ಯತೆ,  ಕಲಿಕಾ ನ್ಯೂನತೆ, ಬಹುವಿಕಲತೆ ಹಾಗೂ ಸಿ.ಪಿ. ಮಕ್ಕಳಿಗೆ ನುರಿತ ತಜ್ಞ ವೈದ್ಯರು ವೈದ್ಯಕೀಯ ತಪಾಸಣೆ ನಡೆಸುವ ಮೂಲಕ ಪುನರ್ವಸತಿ, ಸಾಧನ ಸಲಕರಣೆಗಳನ್ನು ಶಿಪಾರಸು ಮಾಡಲಿದ್ದಾರೆ ಎಂದರು.
ಹೊಸಕೋಟೆಯಲ್ಲಿ ವಿಶ್ವ ಪರಿಸರ ದಿನ
ಹೊಸಕೋಟೆ: ವಿಶ್ವ ಪರಿಸರ ದಿನಾಚರಣೆ ಅಂಗಾವಗಿ ಹೊಸಕೋಟೆಯ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹೊಸಕೋಟೆ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮತ್ತು ಪರಿಸರ ದಿನಾಚರಣೆಯನ್ನು ಗೋಮತಿ ಶೇಠ್ ಪ್ರಧಾನ ಸಿವಿಲ್ ನ್ಯಾಯದೀಶರು  ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿ ದೆಸೆಯಿಂದಲೆ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಬೇ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಅನಿತ ಹೆಚ್.ವಿ. ಹೆಚ್ಚುವರಿ ನ್ಯಾಯಧೀಶರು. ಹೊಸಕೋಟೆ, ಸಾವಿತ್ರಿ ಭಾಯಿ ಪ್ರಾಂಶುಪಾಲರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಶಾಂತಕುಮಾರಿ ಪ್ರಾಂಶುಪಾಲರು ಸರ್ಕಾರಿ ಬಾಲಕರ ಪ್ರೌಢಶಾಲೆ ಉಪಸ್ಥಿತರಿದ್ದರು.
ವಸತಿ ಶಾಲೆಗೆ ಕೌನ್ಸೆಲಿಂಗ್
ರಾಮನಗರ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ವರ್ಷದಿಂದ ತೆರೆಯಲು ಉದೇಶಿಸಿದ್ದ  ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಪ್ರಾರಂಭಿಸದಿರಲು ಸರ್ಕಾರವು ಸೂಚಿಸಿದೆ.  ಈ ಹಿನ್ನೆಲೆಯಲ್ಲಿ 6ನೇ ತರಗತಿಗೆ ಆಯ್ಕೆ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲೆಯಲ್ಲಿ ಖಾಲಿ ಇರುವ ಇತರೆ ವಸತಿ ಶಾಲೆಗಳಲ್ಲಿನ ಸೀಟುಗಳಿಗೆ ಭರ್ತಿ ಮಾಡಬೇಕಾಗಿದೆ. ಆದ್ದರಿಂದ ಜೂ.11ರ ಬೆಳಗ್ಗೆ 10ಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಾತನೂರು ಸರ್ಕಲ್, ಚನ್ನಪಟ್ಟಣ ಟೌನ್ ಇಲ್ಲಿ ಮರು ಕೌನ್ಸೆಲಿಂಗ್ ನಡೆಸಲಾಗುವುದು.  6ನೇ ತರಗತಿಗೆ ಕೌನ್ಸೆಲಿಂಗ್ ಮೂಲಕ ಆಯ್ಕೆಗೊಂಡ 58 ವಿದ್ಯಾರ್ಥಿಗಳು ಕೌನ್ಸೆಲಿಂಗ್ ಸಮಯದಲ್ಲಿ ಹಾಜರಾಗಿ ಆಯ್ಕೆ ಮಾಡಿಕೊಳ್ಳಲು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement