ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಹಕಾರಿ ಬ್ಯಾಂಕುಗಳು ಇ-ತಂತ್ರಜ್ಞಾನ ಅಳವಡಿಸಿಕೊಳ್ಳಲಿ

Rashmi Kasaragodu
Updated On : 8 Jun 2013, 12:25 pm

ಕ.ಪ್ರ.ವಾರ್ತೆ  ದೊಡ್ಡಬಳ್ಳಾಪುರ  ಜೂ.7
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಈಗಾಗಲೇ ಬಹುತೇಕ ಇ-ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಸಹಕಾರಿ ವಲಯದ ಬ್ಯಾಂಕುಗಳಿಗೂ ಈ ತಂತ್ರಜ್ಞಾನ ವಿಸ್ತರಣೆಯಾಗಬೇಕು. ಬದಲಾದ ವಸ್ತುಸ್ಥಿತಿಗೆ ಪೂರಕವಾಗಿ ಬ್ಯಾಂಕಿಂಗ್ ಸೇವೆಗಳು ಸುಲಭದಲ್ಲಿ ಜನರಿಗೆ ಸಿಗುವಂತಾಗಬೇಕು ಎಂದು ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಹೇಳಿದರು.
ಇಲ್ಲಿನ ದಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್(ಟಿಎಂಸಿ ಬ್ಯಾಂಕ್)ನ ನೂತನ ವೆಬ್‌ಸೈಟ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಹಕರು ಬಯಸುವ ಉತ್ತಮ ಸೇವೆ, ಸುಸಜ್ಜಿತ ವ್ಯವಸ್ಥೆಗಳನ್ನು ಒದಗಿಸುವ ನಿಟ್ಟಿನಲ್ಲಿ ವೆಬ್ ಯಶಸ್ವಿಯಾಗಲಿ. ನೇಕಾರರಿಗೆ ನೆರವಾಗುವ ನಿಟ್ಟಿನಲ್ಲಿ ಅರ್ಧದಶಕದ ಹಿಂದೆ ಸ್ಥಾಪಿತವಾದ ಬ್ಯಾಂಕ್ ಇಂದು ಉತ್ತಮ ವಿಶ್ವಾಸದೊಂದಿಗೆ ಬೆಳೆಯುತ್ತಿರುವುದು ಆಶಾದಾಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕೆ.ಪಿ.ವಾಸುದೇವ್ ಮಾತನಾಡಿ ಬ್ಯಾಂಕ್ ಇಂದು ವಾರ್ಷಿಕ 8ರಿಂದ 10 ಕೋಟಿ ವಹಿವಾಟು ನಡೆಸುತ್ತಿದೆ. ಅಕ್ಷಯನಿಧಿ, ನೇಕಾರರ ವಿಮಾ ಯೋಜನೆ, ವಿದ್ಯಾರ್ಥಿ ವೇತನ, ಯಶಸ್ವಿನಿ, ಲಾಕರ್ ಸೌಲಭ್ಯ, ಎಂಐಸಿಆರ್‌ನೊಂದಿಗೆ ಚೆಕ್ ಕ್ಲಿಯರೆನ್ಸ್ ಸೌಲಭ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಡಳಿತ ಮಂಡಲಿ ಉಪಾಧ್ಯಕ್ಷ ಪಿ.ಸಿ.ವೆಂಕಟೇಶ್, ನಿರ್ದೇಶಕ ಎ.ಆರ್.ಶಿವಕುಮಾರ್, ಎ.ಎಸ್.ಕೇಶವ, ಟಿ.ಆವಲಕೊಂಡಪ್ಪ, ಕೆ.ಸಿ.ಗೌರಮ್ಮ, ಕೆ.ಎಂ.ಕೃಷ್ಣಮೂರ್ತಿ, ಜಿ.ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement