30ರೊಳಗೆ ಪಡಿತರ ಪಡೆಯಲು ಸೂಚನೆ
ರಾಮನಗರ: ಜಿಲ್ಲೆಗೆ ಜೂನ್ 2013ರ ಮಾಹೆಗೆ ಸಾರ್ವಜನಿಕ ವಿತರಣೆಗಾಗಿ ಅಕ್ಕಿ, ಗೋಧಿ, ಸೀಮೆಎಣ್ಣೆ ಮತ್ತು ಸಕ್ಕರೆಯನ್ನು ಬಿಡುಗಡೆ ಮಾಡಲಾಗಿದೆ. ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರರು ಈ ತಿಂಗಳ 30ನೇ ತಾರೀಖಿನ ಒಳಗಾಗಿ ತಮ್ಮ ಪಡಿತರವನ್ನು ಪಡೆಯಲು ಸೂಚಿಸಿದೆ. ನ್ಯಾಯಬೆಲೆ ಅಂಗಡಿಯವರು, ಸೀಮೆಎಣ್ಣೆ ಚಿಲ್ಲರೆ ವಿತರಕರು ವಿತರಿಸುವ ಪ್ರಮಾಣ ಮತ್ತು ದರ ಈ ಕೆಳಕಂಡಂತಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 29 ಕೆಜಿ ಅಕ್ಕಿ-ಪ್ರತಿ ಕೆಜಿಗೆ ರು.3, 6 ಕೆಜಿ ಗೋಧಿ-ಪ್ರತಿ ಕೆಜಿಗೆ ರು.2. 1 ಕೆಜಿ ಸಕ್ಕರೆ-ರು.13.50. ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ಕನಿಷ್ಠ 4 ಕೆಜಿ. ಗರಿಷ್ಠ 15 ಕೆಜಿ- ದರ ರು. 3, ಗೋಧಿ 1 ರಿಂದ 3 ಕೆಜಿ, ದರ-ರು.3, ಸಕ್ಕರೆ 1 ಕೆಜಿ, ದರ 13.50. ಸೀಮೆಎಣ್ಣೆ ಅನೌಪಚಾರಿಕ ಪಡಿತರ ಪ್ರದೇಶ ಪ್ರತಿ ಕಾರ್ಡಿಗೆ 6 ಲೀಟರ್ಗಳು, ಪಟ್ಟಣ ಪ್ರದೇಶ ಪ್ರತಿ ಕಾರ್ಡಿಗೆ 6 ಲೀಟರ್ಗಳು, ಗ್ರಾಮಾಂತರ ಪ್ರದೇಶ ಪ್ರತಿ ಕಾರ್ಡಿಗೆ 3 ಲೀಟರ್ಗಳು. ದರ- ನಗರ, ಪಟ್ಟಣ ರು.16.40, ಗ್ರಾಮಾಂತರ ರು.16.90 ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.