ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅತ್ಯಾಚಾರವೆಸಗಿ ಶುಶ್ರೂಷಕಿ ಕೊಲೆ?

Rashmi Kasaragodu
Updated On : 9 Jun 2013, 12:17 pm

ಚನ್ನಪಟ್ಟಣ: ಪಟ್ಟಣದ ಪೂಜಾ ನರ್ಸಿಂಗ್ ಹೋಂ ಶೂಶ್ರುಷಕಿ ಆತ್ಮಹತ್ಯೆಗೆ ಶರಣಾಗಿದ್ದು, ಮೃತಳ ಕುಟುಂಬದವರು ಇದು ಅತ್ಯಾಚಾರವೆಸಗಿ ನಡೆಸಿರುವ ಕೊಲೆ ಎಂದು ಆಪಾದಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಹೊಸ ತಿರುವು ಪಡೆದಿದೆ.
ನಂಜನಗೂಡು ತಾಲೂಕಿನ ಕಾರ್ಯಗ್ರಾಮದ ಮಹೇಶ್ವರಿ(20) ಸಾವಿಗೀಡಾಗಿರುವ ಶೂಶ್ರುಷಕಿ. 9 ತಿಂಗಳಿಂದ ಪೂಜಾ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಸ್ಪತ್ರೆಯ ಸಿಬ್ಬಂದಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಇರಿಸಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತಳ ತಂದೆ ನಾಗರಾಜು, ನನ್ನ ಮಗಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಆಸ್ಪತ್ರೆಯ ವೈದ್ಯ ಮತ್ತು ಆಡಳಿತ ಮಂಡಳಿಯವರು ಉದ್ದೇಶ ಪೂರ್ವಕವಾಗಿ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ಮಗಳ ಶವವನ್ನು ನಾನು ನೋಡಿದಾಗ ಅವಳ ವಸ್ತ್ರಗಳು ಚೆಲ್ಲಾಪಿಲ್ಲಿಯಾಗಿದ್ದವು, ಅವಳ ಮೈಮೇಲೆ ಹೊಡೆದ ಮತ್ತು ಕಚ್ಚಿದ ಗಾಯಗಳ ಗುರುತಿದ್ದು ಇದು ಅತ್ಯಾಚಾರದಿಂದ ಸಂಭವಿಸಿರುವ ಕೊಲೆ ಎಂದು ನಮಗೆ ಅನಿಸುತ್ತಿದೆ. ದಲಿತರಾದ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದಲಿತ ಮುಖಂಡರ ಆಕ್ರೋಶ: ಮಹೇಶ್ವರಿ ಸಾವಿನ ಪ್ರಕರಣವನ್ನು ಮುಚ್ಚಿಹಾಕಲು ಕೆಲ ಮಂದಿ ಹುನ್ನಾರ ನಡೆಸುತ್ತಿದ್ದು, ಈ ಸಾವಿಗೆ ಕಾರಣರಾದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕೆಂದು ತಾಲೂಕು ದಲಿತ ಮುಖಂಡರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement