ಅರ್ಕಾವತಿ ಬಡಾವಣೆಯಲ್ಲಿ ಗ್ರಾಮದೇವತಾ ಉತ್ಸವ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜೂ. 8
ಇಲ್ಲಿನ ನಾಡಪ್ರಭು ಕೆಂಪೇಗೌಡ ಕನ್ನಡ ಸೇನೆ ಮತ್ತು ಜೇನುಗೂಡು ಗೆಳೆಯರ ಬಳಗದ ಅರ್ಕಾವತಿ ಬಡಾವಣೆ ಶಾಖೆ ಉದ್ಘಾಟನಾ ಕಾರ್ಯಕ್ರಮ ಮತ್ತು ಮುತ್ಯಾಲಮ್ಮ ದೇವಿ ಗ್ರಾಮದೇವತಾ ಉತ್ಸವ ನಡೆಯಿತು. ಕಾರ್ಯಕ್ರಮವನ್ನು ನಾಡಪ್ರಭು ಕೆಂಪೇಗೌಡ ಕನ್ನಡ ಸೇನೆ ಸಂಸ್ಥಾಪಕ ಬಿ.ಮುನೇಗೌಡ ಉದ್ಘಾಟಿಸಿದರು. ಸೇನೆಯ ರಾಜ್ಯಾಧ್ಯಕ್ಷ ಎಂ.ಯೋಗೇಶ್ಗೌಡ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ನಾಗರಾಜ, ರಾಜ್ಯ ಉಪಾಧ್ಯಕ್ಷ ರವಿ ಎನ್.ಸಂಪತ್, ಜಂಟಿ ಕಾರ್ಯದರ್ಶಿ ಪ್ರಶಾಂತ್, ಮಹಿಳಾಧ್ಯಕ್ಷೆ ಅಂಜನಾ, ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಮುತ್ಯಾಲಮ್ಮ ದೇವಿ ಉತ್ಸವದ 1ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಸಹ ಏರ್ಪಡಿಸಲಾಗಿತ್ತು.