ಕೊಲೆ: ಪರಾರಿಯಾಗಿದ್ದ ಆರೋಪಿಗಳ ಸೆರೆ
ಹೊಸಕೋಟೆ: ಇಲ್ಲಿಗೆ ಸಮೀಪದ ಆವಲಹಳ್ಳಿ ಪೊಸೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿ ಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಿಂಬೆಕಾಯಿಪುರದ ವಾಸಿ ಮುನಿರಾಜು ಅ.ಕೊಂಡಪ್ಪ(26), ಕಾಟಂನಲ್ಲೂರಿನ ಆರ್.ಅಶೋಕ(25) ಬಂಧಿತ ಆರೋಪಿಗಳು. ಮೇ 27ರಂದು ನಿಂಬೇಕಾಯಿಪುರದ ರಾಜಣ್ಣ (35) ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣವಾಗಿದ್ದು, ಆರೋಪಿಗಳು ರಾಜಣ್ಣನಿಗೆ ಅತಿಯಾಗಿ ಮದ್ಯಪಾನ ಮಾಡಿಸಿ ನಿಂಬೆಕಾಯಿಪುರ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದರು.
ಕಾರು ಉರುಳಿ ಇಬ್ಬರ ಸಾವು
ನೆಲಮಂಗಲ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಮಹದೇವಪುರ ಬಳಿ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೃತರು ಬೆಂಗಳೂರಿನ ರಾಜಾಜಿನಗರ ವಾಸಿಗಳೆಂದು ತಿಳಿದು ಬಂದಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.