ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾಲ್ವರಿಗೆ ಕಲ್ಪಶ್ರೀ ಪ್ರಶಸ್ತಿ ಪ್ರದಾನ

Rashmi Kasaragodu
Updated On : 9 Jun 2013, 12:19 pm

ಕ.ಪ್ರ.ವಾರ್ತೆ    ಮೈಸೂರು    ಜೂ. 8
ಸಂಗೀತ, ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ಗಣ್ಯರಿಗೆ ಚನ್ನಪಟ್ಟಣದ ಕಲ್ಪಶ್ರೀ ಪ್ರದರ್ಶಕ ಕಲೆಗಳ ಕೇಂದ್ರ ಟ್ರಸ್ಟ್ ವತಿಯಿಂದ ಕಲ್ಪಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಶನಿವಾರ ನಡೆದ ಕಲ್ಪಶ್ರೀ ಚಿಣ್ಣರ ನೃತ್ಯೋತ್ಸವದಲ್ಲಿ ಮೈಸೂರಿನ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥಾಪಕಿ ಡಾ. ಚೇತನಾ ರಾಧಾಕೃಷ್ಣ, ಕೊಡಗಿನ ಸಂಗೀತ ಕಲಾ ಕೇಂದ್ರದ ಸಂಸ್ಥಾಪಕ ಶಂಕರಯ್ಯ, ಮೈಸೂರಿನ ನಾದವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡ್ಯಾನ್ಸ್ ಸಂಸ್ಥಾಪಕಿ ಮಿತ್ರಾ ನವೀನ್, ಸರ್ವೇಶ್ವರ ನೃತ್ಯ ಕಲಾಮಂದಿರದ ಸಂಸ್ಥಾಪಕಿ ಪಂಕಜ ರಾಮಕೃಷ್ಣ ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಾಸು ಮಾತನಾಡಿ, ಸಂಗೀತ ಕಲೆ ಉದ್ಧಾರಕ್ಕಾಗಿ ಸ್ಥಾಪಿತಗೊಂಡ ಸಂಸ್ಥೆಗಳು ಶಿಷ್ಯಂದಿರನ್ನು ತಯಾರು ಮಾಡಬೇಕು. ಚನ್ನಪಟ್ಟಣದಲ್ಲಿ ಸ್ಥಾಪನೆಯಾದ ಕಲ್ಪಶ್ರೀ ಸಂಸ್ಥೆಯ ಇಲ್ಲಿ ಬಂದು ಕಾರ್ಯಕ್ರಮ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಕಲಾವಿದರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಹಾರೈಸಿದರು. ಬಯಲುಸೀಮೆ ಸಂಪಾದಕ ಸು.ತ. ರಾಮೇಗೌಡ ಮಾತನಾಡಿ, ಜನರ ಹತ್ತಿರವಾಗಲು ಕಲೆ ಸಂಸ್ಕೃತಿ ಪೂರಕವಾಗಿವೆ. ಇದರಿಂದ ಜನರೂ ಸುಸಂಸ್ಕೃತವಂತರಾಗುತ್ತಾರೆ. ಕಲ್ಪಶ್ರೀ ಆರಂಭಿಸಿರುವ ಮಹತ್ಕಾರ್ಯವನ್ನು ರಾಜ್ಯಾದ್ಯಂತ ಪಸರಿಸುವಂತೆ ಆಶಿಸಿದರು. ಎಸ್ಪಿ ಆರ್. ದಿಲೀಪ್ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳು ಒತ್ತಡದಲ್ಲಿ ಬದುಕುತ್ತಿದ್ದಾರೆ. ಕಲೆ ಸಂಗೀತದ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಕೇವಲ ಪಠ್ಯಕ್ರಮದ ಕಡೆಗೆ ಹೆಚ್ಚು ಗಮನ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪಠ್ಯೇತರ ಚಟುವಟಿಕೆಗಳ ಅಭ್ಯಾಸವೂ ಅಗತ್ಯವಿದೆ ಎಂದರು. ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ನಿಮಿಷಾಂಬ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥಾಪಕ ಶ್ರೀಧರ್ ಜೈನ್, ಚನ್ನಪಟ್ಟಣ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್, ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್ ಬಾಬು, ಜೆಡಿಎಸ್ ಮುಖಂಡ ಎಸ್. ಮಧುಕರ್, ಪಾಲಿಕೆ ಸದಸ್ಯ ಪಿ. ಪ್ರಶಾಂತ್‌ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement