ಪಾರಿವಾಳ ಗುಟ್ಟಕ್ಕೆ ಡಿಸಿ ಶಂಕರ್ ಭೇಟಿ
ದೇವನಹಳ್ಳಿ: ದೇವನಹಳ್ಳಿ ಹೊರವಲಯದಲ್ಲಿರುವ ಪಾರಿವಾಳ ಗುಟ್ಟಕ್ಕೆ ಜಿಲ್ಲಾಧಿಕಾರಿ ಶಂಕರ್ ಶನಿವಾರ ಭೇಟಿ ನೀಡಿದರು. ಈ ಗುಡ್ಡದಲ್ಲಿರುವ ಪುರಾತನ ಗವಿ ವೀರಭದ್ರಸ್ವಾಮಿ ದೇವಾಲಯಕ್ಕೆ ಭಕ್ತರು ಆಗಮಿಸಲು ತೊಂದರೆಯಾಗುವಂತೆ ತಡೆಗೋಡೆ ಕಟ್ಟುತ್ತಿರುವುದರಿಂದ ಭಕ್ತರ ಕೋರಿಕೆಯ ಮೇರೆಗೆ ಜಿಲ್ಲಾಧಿಕಾರಿಗಳು ಆಗಮಿಸಿದ್ದರು.