ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ
ಕ.ಪ್ರ.ವಾರ್ತೆ ಕನಕಪುರ ಜೂ. 8
ಪರಿಸರ ಜಾಗೃತಿ, ಸಂರಕ್ಷಣೆ ಹಾಗೂ ಪರಿಸರದ ಬಗ್ಗೆ ಪ್ರೀತಿ ಮೂಡಿಸುವ ಕಾರ್ಯವನ್ನು ವೈಎಚ್ಎಐ ನಡೆಸುತ್ತಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ದೇಶದಾದ್ಯಂತ ಚಾರಣ ನಡೆಸಿ ಜನರನ್ನು, ಸಂಸ್ಕೃತಿಗಳನ್ನು ಹಾಗೂ ಸ್ಥಳಗಳನ್ನು ಅರಿತುಕೊಳ್ಳಲು ಸಹಕರಿಸುತ್ತಿದೆ ಎಂದು ಕನಕಪುರ ಯೂತ್ ಹಾಸ್ಟೆಲ್ ಅಸೋಸಿಯೇಷನ್ ನಿರ್ದೇಶಕ ಕ್ಯಾಪ್ಟನ್ ಎಚ್ಎಂಟಿ ಸುಬ್ರಹ್ಮಣ್ಯ ಹೇಳಿದ್ದಾರೆ.
ಚನ್ನಪಟ್ಟಣ ಹೊರವಲಯದ ಅಂಬೇಡ್ಕರ್ ಕಾಲೋನಿ ಸರ್ಕಾರಿ ಪ್ರಾಥಮಿಕ ಶಾಲೆಯ 70 ಮಂದಿ ಮಕ್ಕಳಿಗೆ ಉಚಿತ ಹೊಲಿದ ಸಮವಸ್ತ್ರಗಳ ವಿತರಣೆಯನ್ನು ನೆರವೇರಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವೈಎಚ್ಎಐ ಅಧ್ಯಕ್ಷ ಜಿ.ಎನ್.ಸತೀಶ್ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಎಲ್ಲಾ ಮಕ್ಕಳಿಗೂ ಹೊಯ್ಸಳ ಯುವಕ ಸಂಘ, ವಿನಾಯಕ ಸ್ವಸಹಾಯ ಸಂಘಗಳ ವತಿಯಿಂದ ಉಚಿತವಾಗಿ ನೋಟ್ಪುಸ್ತಕ ಹಾಗೂ ಲೇಖನ ಸಾಮಗ್ರಿಗಳ ವಿತರಣೆಯನ್ನು ವೆಂಕಟೇಶಗುಪ್ತ ಹಾಗೂ ಚಿದಾನಂದ್ ನೆರವೇರಿಸಿದರು. ಮುಖ್ಯಅತಿಥಿಗಳಾಗಿ ರಂಜಿತ್, ಬಾಲಸುಬ್ರಹ್ಮಣ್ಯಂ, ವೈಎಚ್ಎಐ ನಿರ್ದೇಶಕರುಗಳಾದ ಸಿ.ಎಸ್. ನಾಗರಾಜ, ನಾಗೇಶ್, ಗೋವರ್ಧನ್, ಎಸ್ಡಿಎಂಸಿ ಉಪಾಧ್ಯಕ್ಷ ರಾಮಕೃಷ್ಣಯ್ಯ, ಸವಿತಾ, ವೆಂಕಟಲಕ್ಷ್ಮೀ ಆಗಮಿಸಿದ್ದರು. ಮುಖ್ಯಶಿಕ್ಷಕ ಎಚ್.ಸಿ.ಲಿಂಗರಾಜು ಸ್ವಾಗತಿಸಿದರು. ಸಹಶಿಕ್ಷಕಿ ಶಾರದಾನಾಗೇಶ್ ವಂದಿಸಿದರು.