ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗಂಗರಸ ಕಾಲೇಜ್ ಆಫ್ ಫೈನ್ ಆರ್ಟ್ಸ್ಗೆ ಅರ್ಜಿ ಆಹ್ವಾನ

Rashmi Kasaragodu
Updated On : 11 Jun 2013, 12:45 pm

ರಾಮನಗರ: ಚನ್ನಪಟ್ಟಣ ತಾಲೂಕಿನ ಹೊಂಬೇಗೌಡ ಶಿಕ್ಷಣ ಸಂಸ್ಥೆಯಲ್ಲಿರುವ ಗಂಗರಸ ಕಾಲೇಜ್ ಆಫ್ ಫೈನ್ ಆರ್ಟ್ಸ್ನಿಂದ ಚಿತ್ರಕಲೆ, ವಾಸ್ತುಶಿಲ್ಪ, ಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣ, ಪಿಯುಸಿಯಲ್ಲಿ ಉತ್ತೀರ್ಣ, ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ವಿಶ್ವ ವಿದ್ಯಾಲಯದಿಂದ ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್(ಬಿವಿಎ) ಮಾನ್ಯತೆ ಪಡೆದಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ, ವಸತಿ, ಬಸ್, ರೈಲು ಪಾಸ್ ನೀಡಲಾಗುವುದು. ಅಲ್ಲದೆ, ಎಸ್ಸಿಎಸ್ಟಿ ವಿದ್ಯಾಥಿಂಗಲಿಗೆ ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ. ಮಾಹಿತಿಗಾಗಿ ಗಂಗರಸ ಕಾಲೇಜ್ ಆಫ್ ಫೈನ್ ಆರ್ಟ್ಸ್, ಹೊಂಬೇಗೌಡ ಶಿಕ್ಷಣ ಸಂಸ್ಥೆ, ಕೆಂಗಲ್, ಚನ್ನಪಟ್ಟಣ ಹಾಗೂ ದೂ. 080 2730084, ಪ್ರಾಂಶುಪಾಲ ಎಮ್.ಎನ್. ದೊಡ್ಡಾಚಾರ್ 8762990729 ಸಂಪರ್ಕಿಸಬಹುದು.
ಯೂಕೊ ಬ್ಯಾಂಕ್ ಶಾಖೆ ಉದ್ಘಾಟನೆ
ರಾಮನಗರಛ ನಗರದ ರೇಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಕೆಜಿಎನ್ ಕಾಂಪ್ಲೆಕ್ಸ್ನಲ್ಲಿ ಯೂಕೊ ಬ್ಯಾಂಕ್ ಶಾಖೆಗೆ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್. ಚಂದ್ರಶೇಖರನ್ ಸೋಮವಾರ ಚಾಲನೆ ನೀಡಿದರು.  ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಅತ್ಯುನ್ನತ ಸೇವೆ ನೀಡುವ ದೃಷ್ಟಿಯಿಂದ ಯೂಕೊ ಬ್ಯಾಂಕಿನ ಶಾಖೆಯನ್ನು ರಾಮನಗರದಲ್ಲಿ ಪ್ರಾರಂಭಿಸಲಾಗಿದೆ. ಗ್ರಾಹಕರು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಹಿತ ಹತ್ತು ಹಲವು ಸೇವೆಗಳನ್ನು ಬ್ಯಾಂಕ್ ಪ್ರಾರಂಭಿಸಿದೆ. ಸಾಲಗಾರರು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಸಲಹೆ ನೀಡಿದರು.   ಬ್ಯಾಂಕಿನ ಬೆಂಗಳೂರು ವಲಯ ಪ್ರಬಂಧಕ ಎಸ್. ವೈದ್ಯನಾಥನ್ ಮಾತನಾಡಿ, ದೇಶದಲ್ಲಿ ಯೂಕೊ ಬ್ಯಾಂಕ್ 3 ಸಾವಿರ ಶಾಖೆಗಳನ್ನು ತೆರೆದಿದೆ. ಈ ಪೈಕಿ ರಾಜ್ಯದಲ್ಲಿ 49 ಶಾಖೆಗಳಿವೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ಬ್ಯಾಂಕಿನ ಪ್ರಮುಖ ಉದ್ದೇಶವಾಗಿದೆ ಎಂದರು.
ಗಾಂಜಾ ಮಾರಾಟ; ಆರೋಪಿ ಸೆರೆ
ಬೆಂಗಳೂರು: ಅಂಜನಪ್ಪ ಗಾರ್ಡನ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮುರುಗ ಎಂಬಾತನನ್ನು ಕಾಟನ್ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ನಾಲ್ಕು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಯಿಂದ ಲಕ್ಷಾಂತರ ರು ಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿ ತಮಿಳುನಾಡು ಸೇಲಂನ ಜಾಫರ್ ಎಂಬಾತನಿಂದ ಗಾಂಜಾ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement