ಮುತ್ತತ್ತಿಯಲ್ಲಿ ನಗರದ ಯುವಕ ನೀರುಪಾಲು
ಹಲಗೂರು: ಪ್ರವಾಸಿ ಕ್ಷೇತ್ರ ಮುತ್ತತ್ತಿ ಕಾವೇರಿ ನದಿಗೆ ಕಾಲುಜಾರಿ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು ನಿವಾಸಿ ಚನ್ನೇಗೌಡ (25) ಮೃತಪಟ್ಟವರು. ಮೂಲತಃ ರಾಮನಗರ ತಾಲೂಕು ಹೊಂಬೇಗೌಡನದೊಡ್ಡಿ ಗ್ರಾಮದ ವಾಸಿ ಚನ್ನ ಹನುಮಯ್ಯ ಅವರ ಮಗ ಸಿ. ಚನ್ನೇಗೌಡ ಬೆಂಗಳೂರಿನ ಗಾಂಧಿನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಭಾನುವಾರ ರಜಾ ದಿನ ಸ್ನೇಹಿತ ಚೇತನ್ ಅವರ ಹುಟ್ಟು ಹಬ್ಬ ಆಚರಿಸುವ ಸಲುವಾಗಿ ಎರಡು ಮೋಟಾರ್ ಬೈಕ್‌ನಲ್ಲಿ ಚಂದ್ರಶೇಖರ, ಚೇತನ, ಉದಯ, ಚನ್ನೇಗೌಡ ಮುತ್ತತ್ತಿಗೆ ಬಂದು ದೇವರ ದರ್ಶನ ಪಡೆದು ಊಟ ಮುಗಿದ ನಂತರ ಕೈತೊಳೆಯಲು ಕಾವೇರಿ ನದಿಯ ದಡಕ್ಕೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಚನ್ನೇಗೌಡ ಮೃತಪಟ್ಟಿದ್ದಾರೆ. ಡಾ. ಶ್ವೇತ ಶವ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಎ ಎಸ್ ಐ ಶಂಕರಯ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.