ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯೋಧ ಯೋಗಾನಂದ ಪಾರ್ಥಿವ ಶರೀರ ನಗರಕ್ಕೆ

Rashmi Kasaragodu
Updated On : 11 Jun 2013, 12:45 pm

ಬೆಂಗಳೂರು/ದೇವನಹಳ್ಳಿ: ಜಮ್ಮು ಕಾಶ್ಮೀರದ ಲೇಹ್-ಲಡಾಕ್ ಪ್ರದೇಶದಲ್ಲಿ 'ಅಪರೇಷನ್ ಮೇಘಧೂತ್' ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ ಕನ್ನಡಿಗ ಯೋಧ ಯೋಗಾನಂದ ಅವರ ಪಾರ್ಥಿವ ಶರೀರ ಸೋಮವಾರ ಸಂಜೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚೌಳಗಲ ಅಗ್ರಹಾರ ನಿವಾಸಿಯಾಗಿರುವ ಯೋಗಾನಂದ ಅವರು ಫಿರಂಗಿ ರೆಜಿಮೆಂಟ್ನಲ್ಲಿ ಬ್ಯಾಟರಿ ಹವಾಲ್ದಾರ್ ಮೇಜರ್ (ಬಿಎಚ್ಎಂ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಭಾನುವಾರ ಬೆಳಗಿನ ಜಾವ ಲೇಹ್-ಲಡಾಕ್ ಪ್ರದೇಶದಲ್ಲಿ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆಯಲ್ಲಿ ಯೋಗಾನಂದ ಹುತಾತ್ಮರಾಗಿದ್ದಾರೆ.  ಸೋಮವಾರ ಸಂಜೆ ವಿಮಾನ ನಿಲ್ದಾಣದಿಂದ ಯೋಗಾನಂದ ಅವರ ಪಾರ್ಥೀವ ಶರೀರವನ್ನು ಮಿಲಿಟರಿ ವಾಹನದಲ್ಲಿ ಸ್ವಂತ ಊರು ಅಗ್ರಹಾರಕ್ಕೆ ಕೊಂಡೊಯ್ಯಲಾಯಿತು. ಮಂಗಳವಾರ ಸಕಲ ಸೇನಾ ಗೌರವಗಳೊಂದಿಗೆ ಯೋಗಾನಂದ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಲಿದೆ. ಯೋಗಾನಂದ ಅವರು ತಮ್ಮ ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement