ಸಮಗ್ರ ಕೃಷಿಯಲ್ಲಿ ರೈತರನ್ನು ತೊಡಗಿಸುವುದೇ ಭೂ ಚೇತನ ಯೋಜನೆ ಗುರಿ: ಅಣ್ಣಯ್ಯ
ಕ.ಪ್ರ.ವಾರ್ತೆ ಮಾಗಡಿ ಜೂ.10
ಸಮಗ್ರ ಕೃಷಿಯಲ್ಲಿ ರೈತರನ್ನು ತೊಡಗಿಸುವುದೇ ಭೂ ಚೇತನ ಯೋಜನೆ, ಇದರ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಮೂಲ್ಯವಾದುದು ಎಂದು ಜಿಲ್ಲಾ ಸಹಾಯಕ ಜಂಟೀ ನಿರ್ದೇಶಕ ಅಣ್ಣಯ್ಯ ನುಡಿದರು.
ಅವರು ಮಾಗಡಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ 2013-14ನೇ ಸಾಲಿನ ಭೂಚೇತನ 2ನೇ ಹಂತದ ಕಸಬಾ ಹೋಬಳಿ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಾ ಆಧುನಿಕ ತಳಿಗಳಿಗೆ ಅಧಿಕ ಲಘು ಪೋಷಕಾಂಶ ಸಮಗ್ರವಾಗಿ ನೀಡಬೇಕಿದೆ. ಭೂಚೇತನ ಕಾರ್ಯಕ್ರಮದಿಂದ ಈಗಾಗಲೇ ಅಧಿಕ ಇಳುವರಿ ಕಂಡಿದ್ದೇವೆ. ರೈತರು ಸಮಗ್ರ ಕೃಷಿಯಲ್ಲಿ ಪ್ರತಿ ಬೆಳೆಗೂ ಸಾವಯವ ಗೊಬ್ಬರ ಬಳಕೆ ಕಡ್ಡಾಯಗೊಳಿಸುವುದನ್ನು ರೂಢಿಸಿಕೊಳ್ಳಬೇಕು. ರಾಸಾಯಿನಿಕ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗುತ್ತದೆ. ಅಧಿಕ ರಾಸಾಯನಿಕ ಗೊಬ್ಬರ ಬಳಕೆ ಬೇಡ. ಸಮಗ್ರ ಆಹಾರ ಬಳಕೆಯಿಂದಾಗಿ ಆರೋಗ್ಯದಲ್ಲಿ ಸುಧಾರಣೆ ಕಾಣಲು ಸಾಧ್ಯವಿದೆ. ರಿಯಾಯಿತಿ ದರದಲ್ಲಿ ಇಲಾಖೆ ನೀಡುವ ಬಿತ್ತನೆ ಬೀಜ, ಲಘು ಪೋಷಕಾಂಶ, ಕೃಷಿ ಸಲಕರಣೆ ಸದ್ಬಳಕೆ ಮಾಡಿಕೊಳ್ಳಬೇಕು. ಭೂಚೇತನದಲ್ಲಿ ತಾಂತ್ರಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು ಅಧಿಕ ಇಳುವರಿ ಪಡೆದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗು ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕು. ಭೂಚೇತನ ಯೋಜನೆಗೆ ಅವಲಂಭಿತ ಇಲಾಖೆಗಳು ಹಾಗೂ ರೈತರು ಒಟ್ಟಾಗಿ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
ಅನುವುದಾರರ ಪಾತ್ರ ಬಹಳ ಮುಖ್ಯ: ಭೂಚೇತನ ಯೋಜನೆಗೆ ತಾಲೂಕಿನಲ್ಲಿ ಸುಮಾರು 54 ಮಂದಿ ಅನುವುದಾರರನ್ನು ನೇಮಕ ಮಾಡಿಕೊಂಡು ಸಮಗ್ರವಾಗಿ ತರಬೇತಿ ನೀಡಲಾಗಿದೆ. ಇವರು ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಮೂಲಕ ರೈತರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸುವುದು, ಆಹಾರ ಉತ್ಪಾದನೆ ಮತ್ತು ಆರ್ಥಿಕ ಸುಧಾರಣೆಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬ್ಯಾಂಕ್ಗಳು ಸಹ ರೈತರಿಗೆ ಸಹಾಯಧನದ ಜೊತೆಗೆ ಸಾಲ ಸೌಲಭ್ಯ ನೀಡಲಿವೆ. ಅನುವುಗಾರರೊಳಗೊಂಡ ದಾಸ್ತುನು ಮಾರಾಟ ಮಳಿಗೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ರಸಗೊಬ್ಬರ ಬಳಸದಿರಿ: ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರೈತರು ಕೃಷಿಯಲ್ಲಿ ರಸಗೊಬ್ಬರ ಬಳಕೆ ಮಾಡದಂತೆ ಪ್ರಮಾಣ ಮಾಡಬೇಕು. ಭೂಚೇತನ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳಬೇಕು. ಸಕಾಲಕ್ಕೆ ಸೌಲತ್ತು ದೊರಕದೆ ಇದ್ದಾಗ ರೈತರು ಬೆಳೆಯಲ್ಲಿ ನಷ್ಟ ಅನುಭವಿಸುತ್ತಾರೆ. ರೈತರಿಗೆ ಸಕಾಲಕ್ಕೆ ರಿಯಾಯಿತಿ ಧರದಲ್ಲಿ ಸರ್ಕಾರಿ ಸೌಲತ್ತು ಕೊಡಲು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕಿದೆ ಎಂದರು. ತಾ.ಪಂ. ಸದಸ್ಯ ಜಿ. ಕೃಷ್ಣ ಮಾತನಾಡಿ ರೈತರು ಜಮೀನಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ಬಳಸಿ, ಮೂಟೆ ಗೊಬ್ಬರ ತ್ಯೆಜಸಿ, ಮಳೆ ವೈಪರಿತ್ಯ ತಡೆಗೆ ಹೊಲದ ಬದುಗಳಲ್ಲಿ ಸಾಮಾಜಿಕ ಅರಣ್ಯ ಸಸಿಗಳನ್ನು ಬೆಳಸಬೇಕು ಎಂದರು. ಇದೇ ಸಂದರ್ಭದಲ್ಲಿ ಹಾವು ಕಚ್ಚಿ ಸತ್ತ ರೈತ ಕುಟುಂಬದ ಪತ್ನಿಗೆ ಪರಿಹಾರ ಧನದ ಚಕ್ ಅನ್ನು ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್ ವಿತರಿಸಿದರು.
ತಾ.ಪಂ. ಮಾಜಿ ಉಪಾಧ್ಯಕ್ಷ ನಾಗರಾಜು, ಶಿವಲಿಂಗೇಗೌಡ, ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ್, ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ರಮೇಶ್ ಎಸ್. ದೇಶಪಾಂಡೆ, ಇಕ್ರಾ ಸಂಸ್ಥೆಯ ದೇವೇಂದ್ರರಾವ್, ಚಂದೂರಾಯನಹಳ್ಳಿ ಕೆವಿಕೆ ಕೀಟ ತಜ್ಞ ಡಾ.ಮುರಳಿಮೋಹನ್, ಗ್ರಾ.ಪಂ. ಸದಸ್ಯೆ ರತ್ನಮ್ಮ, ತಾ.ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ, ಅಧಿಕಾರಿಗಳಾದ ಪರಮಶಿವಯ್ಯ, ಗೋವಿಂದಪ್ಪ, ಆನಂದ್, ಮಂಜುನಾಥ್ ಇತರರು ಇದ್ದರು.