ದರೋಡೆ; ನಾಲ್ವರ ಬಂಧನ
ಆನೇಕಲ್ಲು: ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಕುಖ್ಯಾತ ದರೋಡೆಕೋರರನ್ನು ಜೀವದ ಹಂಗು ತೊರೆದು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ಬೇಗೂರು ಠಾಣಾ ವ್ಯಾಪ್ತಿಯ ಕಾಳೇನ ಅಗ್ರಹಾರದ ನಂದೀಶ ಅ. ಗಣಿ, ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹೆನ್ನಾಗರದ ಅಂತೋಣಿ ರಾಜ್ ಅ. ರಾಜಾ, ಹಾಗೂ ಹೆಬ್ಬಗೋಡಿಯ ಶಿವ ಅ. ಶಿವರಾಜ ಅ. ದೊಂಗ, ಜಿಗಣಿ ಠಾಣಾ ವ್ಯಾಪ್ತಿಯ ಮಾರಗೊಂಡನಹಳ್ಳಿಯ ಮೃತ್ಯುಂಜಯ ಅ, ಮುತ್ತು ಬಂಧಿತರು. ಇವರು ಚಂದಾಪುರ-ಹೀಲಲಿಗೆ ರೇಲ್ವೆ ಟ್ರಾಕ್ ಅನ್ನು ಕಾರ್ಯಾಸ್ಥಾನವಾಗಿಸಿಕೊಂಡು ರಾತ್ರಿ ವೇಳೆ ದರೋಡೆ ಮಾಡುತ್ತಿದ್ದರು.